ಅರ್ಜುನ್ ಸರ್ಜಾ ಹುಟ್ಟುಹಬ್ಬಕ್ಕೆ ಜೂ.ಚಿರು ವಿಶ್

ಬೆಂಗಳೂರು: ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಹುಟ್ಟು 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಜೂನಿಯರ್ ಚಿರು ಸಹ ಮಾಮನಿಗೆ ವಿಶ್ ಮಾಡಿದ್ದಾನೆ. ಈ ಕ್ಯೂಟ್ ಫೋಟೋವನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ.

ಇನ್‍ಸ್ಟಾಗ್ರಾಂನಲ್ಲಿ ಸ್ಟೋರಿ ಪೋಸ್ಟ್ ಮಾಡಿರುವ ಅವರು, ಅರ್ಜುನ್ ಸರ್ಜಾ ಹಾಗೂ ಜೂನಿಯರ್ ಚಿರು ಕಾಲಕಳೆಯುತ್ತಿರುವ ಫೋಟೋ ಹಾಕಿ ವಿಶ್ ಮಾಡಿದ್ದಾರೆ. ಈ ಮೂಲಕ ಜೂ.ಚಿರು ಕಡೆಯಿಂದಲೂ ವಿಶ್ ತಿಳಿಸಿದ್ದಾರೆ. ಈ ಫೋಟೋದಲ್ಲಿ ಅರ್ಜುನ್ ಸರ್ಜಾ ಜೂ.ಚಿರು ಜೊತೆ ಆಟವಾಡುತ್ತ ಕಾಲ ಕಳೆಯುತ್ತಿದ್ದಾರೆ. ಫೈಟಿಂಗ್ ಮಾಡುವ ರೀತಿಯ ಆ್ಯಕ್ಷನ್ ತೋರಿಸಿದ್ದಾರೆ. ಜೂ.ಚಿರು ಸಹ ಅಷ್ಟೇ ಗಂಭೀರವಾಗಿ ನೋಡಿದ್ದಾನೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅರ್ಜುನ್ ಸರ್ಜಾ ಸೇರಿದಂತೆ ಮನೆಯವರೆಲ್ಲರಿಗೂ ಜೂನಿಯರ್ ಚಿರು ಎಂದರೆ ಎಲ್ಲಿಲ್ಲದ ಪ್ರೀತಿ. ಹೆಚ್ಚು ಕಾಲ ಕಳೆಯುತ್ತಿರುತ್ತಾರೆ, ಈ ಕುರಿತು ಫೋಟೋಗಳನ್ನು ಸಹ ಮೇಘನಾ ರಾಜ್ ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದೇ ರೀತಿ ಇದೀಗ ಮಾಮನಿಗೆ ಜೊತೆಗಿನ ಫೋಟೋ ಹಾಕಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

 

View this post on Instagram

 

A post shared by Meghana Raj Sarja (@megsraj)

ಇತ್ತೀಚೆಗೆ ಮಗನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಮೇಘನಾ ಪೋಸ್ಟ್ ಮಾಡಿದ್ದರು. ಇದಕ್ಕೂ ಮೊದಲು ಅಪ್ಪನ ಡ್ಯಾನ್ಸ್ ನೋಡುವುದರಲ್ಲಿ ಜೂ.ಚಿರು ಬ್ಯುಸಿಯಾಗಿದ್ದ ವೀಡಿಯೋವನ್ನು ಹಂಚಿಕೊಂಡಿದ್ದರು. ಈ ಪೋಸ್ಟ್ ಗಳಿಗೆ ಅಭಿಮಾನಿಗಳು ಸಹ ಕಮೆಂಟ್, ಲೈಕ್ ಮೂಲಕ ಪ್ರೀತಿ ತೋರಿಸಿದ್ದರು.

 

View this post on Instagram

 

A post shared by Meghana Raj Sarja (@megsraj)

ಮೇಘನಾ ರಾಜ್ ಸರ್ಜಾ ತಾಯಿಯಾದ ಬಳಿಕ ಮೊದಲ ಬಾರಿಗೆ ಕ್ಯಾಮೆರಾ ಫೇಸ್ ಮಾಡುತ್ತಿರುವ ಬಗ್ಗೆ ಇತ್ತೀಚೆಗೆ ಪೋಸ್ಟ್ ಮಾಡಿದ್ದರು. ಜೂನಿಯರ್ ಚಿರುಗೆ ಒಂಬತ್ತು ತಿಂಗಳು. ವರ್ಷದ ಬಳಿಕ ಕ್ಯಾಮೆರಾ ಫೇಸ್ ಮಾಡುತ್ತಿದ್ದೇನೆ ಎಂದು ಬರೆದು ಹಾರ್ಟ್ ಎಮೋಜಿ ಹಾಕಿ, ಬ್ಯಾಕ್ ಟು ಬೇಸಿಕ್ಸ್ ಎಂದು ಹ್ಯಾಶ್ ಟ್ಯಾಗ್ ಬರೆದಿದ್ದರು. ಈ ಮೂಲಕ ಮತ್ತೆ ಚಿತ್ರೀಕರಣಕ್ಕೆ ಮರಳಿರುವುದಾಗಿ ತಿಳಿಸಿದ್ದರು.

Source: publictv.in Source link