ಎಂ.ಪಿ ರೇಣುಕಾಚಾರ್ಯ ಕಾರ್​ ಅಡ್ಡಗಟ್ಟಿ ಫೋಟೋ ತೆಗೆಸಿಕೊಂಡ ಮಕ್ಕಳು

ಎಂ.ಪಿ ರೇಣುಕಾಚಾರ್ಯ ಕಾರ್​ ಅಡ್ಡಗಟ್ಟಿ ಫೋಟೋ ತೆಗೆಸಿಕೊಂಡ ಮಕ್ಕಳು

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಜನಸೇವೆ ಮಾಡುತ್ತಾ ಗಮನ ಸೆಳೆಯುತ್ತಿರುವ ಶಾಸಕ ಎಂ.ಪಿ ರೇಣುಕಾಚಾರ್ಯ ಸದಾ ಸುದ್ದಿಯಲ್ಲೇ ಇರುತ್ತಾರೆ. ಈಗ ಕಾರಿನಲ್ಲಿ ಹೋಗುವ ಮಾರ್ಗದ ಮಧ್ಯೆ ಫೋಟೋ ತೆಗೆಸಿಕೊಳ್ಳಬೇಕು ಎಂದು ಇಂಗಿತ ವ್ಯಕ್ತಪಡಿಸಿದ ಮಕ್ಕಳ ಆಸೆಯನ್ನು ಈಡೇರಿಸಿ ಸುದ್ದಿಯಾಗಿದ್ದಾರೆ.

ಹೌದು, ಮನೆಯಿಂದ ಕಾರಿನಲ್ಲಿ ಹೊರಗೆ ಹೋಗುತ್ತಿದ್ದ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯರನ್ನು ಮಾರ್ಗ ಮಧ್ಯೆ ತಡೆದು ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳುವಂತೆ ಮಕ್ಕಳು ಇಂಗಿತ ವ್ಯಕ್ತಪಡಿಸಿದ್ದಾರೆ. ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿ ಮಕ್ಕಳು ರೇಣುಕಾಚಾರ್ಯರನ್ನು ತಡೆದು ರಾಯಣ್ಣನ ಕಟೌಟ್ ಮುಂದೆಯೇ ಮಕ್ಕಳು ಫೋಟೋ ತೆಗೆದುಕೊಂಡು ಸಂತೋಷಪಟ್ಟರು.

ಇದನ್ನೂ ಓದಿ: ಅಶ್ರಫ್ ಗನಿ ರಾಜೀನಾಮೆ; ಅಫ್ಘಾನಿಸ್ತಾನ​​​ ಮುಂದಿನ ಅಧ್ಯಕ್ಷ ಮುಲ್ಲಾ ಬರಾದರ್

ಈ ಸಂಬಂಧ ಟ್ವೀಟ್​​ ಮಾಡಿರುವ ಶಾಸಕ ಎಂ.ಪಿ ರೇಣುಕಾಚಾರ್ಯ, ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆ ಹಿನ್ನೆಲೆ ಅರಬಗಟ್ಟೆ ಗ್ರಾಮದಲ್ಲಿ ಯುವಕರು ನನ್ನೊಂದಿಗೆ ಫೋಟೋ ತೆಗೆಸಿಕೊಂಡರು. ಫೋಟೋಗೆ ಪೋಸ್​​ ಕೊಟ್ಟು ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆ ಮಾಡುತ್ತಿದ್ದ ಯುವಕರಿಗೆ ಶುಭಕೋರಿದೆ. ರಾಯಣ್ಣನಿಗೆ ನಮಿಸಿ ಯುವಕರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದೆ ಎಂದು ಬರೆದುಕೊಂಡಿದ್ದಾರೆ.

Source: newsfirstlive.com Source link