ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇದೆ.. ಅವರು ಹೇಳಿದ್ದೆಲ್ಲವೂ ಉಲ್ಟಾ ಆಗುತ್ತೆ- ಸಿ.ಟಿ. ರವಿ

ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇದೆ.. ಅವರು ಹೇಳಿದ್ದೆಲ್ಲವೂ ಉಲ್ಟಾ ಆಗುತ್ತೆ- ಸಿ.ಟಿ. ರವಿ

ಚಿಕ್ಕಮಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದೆಲ್ಲವೂ ಉಲ್ಟಾ ಆಗುತ್ತೆ, ಅವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ ಎಂದು ಚಿಕ್ಕಮಗಳೂರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ವೀರ ಸಾವರ್ಕರ್ ಗೊತ್ತಿಲ್ಲದವರಿಗೆ ಹುಟ್ಟಿನ ಬಗ್ಗೆಯೂ ಸಂಶಯವಿರುತ್ತೆ: ಸಿ.ಟಿ. ರವಿ

 

ಸಿದ್ದರಾಮಯ್ಯನವರು ಕಾಲಜ್ಞಾನಿನಾ..? ಅಪ್ಪನಾಣೆ ಮೋದಿ ಪ್ರಧಾನಿ ಆಗಲ್ಲ ಅಂದಿದ್ರು, ಮೋದಿ 2 ಸಲ ಪ್ರಧಾನಿಯಾದ್ರು. ಸಿದ್ದರಾಮಯ್ಯ ಏನು ಹೇಳುತ್ತಾರೋ ಅದರ ಉಲ್ಟಾ ಆಗುತ್ತೆ . 2018ರಲ್ಲಿ ನಾನು ಮತ್ತೆ ಅಧಿಕಾರಕ್ಕೆ ಬಂದೇ ಬರ್ತೀನಿ ಎಂದಿದ್ರು ಬಂದ್ರಾ..? ಅವರು ಹೇಳಿದ್ದಕ್ಕೆ ತದ್ವಿರುದ್ಧವಾದದ್ದು ಆಗುತ್ತೆ. ಅವರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂದ್ರೆ ನೂರಕ್ಕೆ ನೂರು ಕಾಂಗ್ರೆಸ್ ಬರಲ್ಲ.

ಇದನ್ನೂ ಓದಿ: ‘ನಮ್ದು ಕಣೋ ಇದು’ ಧ್ವಜಸ್ತಂಭಕ್ಕೆ ಮುತ್ತಿಟ್ಟು ದೇಶಪ್ರೇಮ ಮೆರೆದ ಶಾಸಕ ಜಮೀರ್

ಬಿಜೆಪಿ ಉಳಿಯಲ್ಲ ಅಂದ್ರೆ ಈ ಅವಧಿ ಮುಗಿಸಿ ಮತ್ತೆ ಮುಂದಿನ 5 ವರ್ಷಕ್ಕೂ ಬರುತ್ತೆ. ಅವರು ಹೇಳಿದ್ದು ನಡೆಯುತ್ತೆ ಎಂದು ಕೆಲವರ ಬಾಯಲ್ಲಿ ಮಚ್ಚೆ ಇರುತ್ತೆ ಅಂತಾರೆ. ಆದರೆ, ಸಿದ್ದರಾಮಯ್ಯನವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ ಎಂದು ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

Source: newsfirstlive.com Source link