ಇಂಜುರಿಯಿಂದ ಚೇತರಿಸಿಕೊಂಡ ಶ್ರೇಯಸ್ ಅಯ್ಯರ್.. ತಂಡಕ್ಕೂ ಮೊದಲೇ ಯುಎಇಗೆ ಪ್ರಯಾಣ

ಇಂಜುರಿಯಿಂದ ಚೇತರಿಸಿಕೊಂಡ ಶ್ರೇಯಸ್ ಅಯ್ಯರ್.. ತಂಡಕ್ಕೂ ಮೊದಲೇ ಯುಎಇಗೆ ಪ್ರಯಾಣ

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮಿಡಲ್​ ಆರ್ಡರ್​ ಬ್ಯಾಟ್ಸ್​ಮನ್​ ಶ್ರೇಯಸ್ ಅಯ್ಯರ್ ಏಕಾಂಗಿಯಾಗಿ ಯುಇಎಗೆ ಹಾರಿದ್ದಾರೆ. ಇಂಜುರಿಯಿಂದ ಸಂಪೂರ್ಣ ಚೇತರಿಸಿಕೊಂಡಿರುವ ಅಯ್ಯರ್​, ಐಪಿಎಲ್​ 2ನೇ ಹಂತದ ಪಂದ್ಯಗಳನ್ನಾಡಲು ತಂಡಕ್ಕೂ ಮೊದಲೇ ಏಕಾಂಗಿಯಾಗಿ ಅರಬ್ಬರ ನಾಡಿಗೆ ತೆರಳಿದ್ದಾರೆ.

ಶ್ರೇಯಸ್​​ ಅಯ್ಯರ್​ ಯುಇಎಗೆ ತೆರಳಿದ್ದು, ಅಲ್ಲಿಯೇ ಅವರು ಅಭ್ಯಾಸವನ್ನ ಆರಂಭಿಸಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್​​ ಮೂಲಗಳು ಖಚಿತಪಡಿಸಿವೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಶ್ರೇಯಸ್ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಫೀಲ್ಡಿಂಗ್ ವೇಳೆ ಅಯ್ಯರ್ ಭುಜಕ್ಕೆ ತೀವ್ರ ಗಾಯವಾಗಿತ್ತು. ಆ ಬಳಿಕ ತಂಡದಿಂದ ಹೊರ ಬಿದ್ದದ್ದ ಅಯ್ಯರ್, ಐಪಿಎಲ್ ಮೊದಲ ಹಂತದ ಪಂದ್ಯಗಳಲ್ಲಿ ಆಡಿರಲಿಲ್ಲ. ಸುಮಾರು ಐದು ತಿಂಗಳ ಬಳಿಕ ಸಂಪೂರ್ಣ ಚೇತರಿಸಿಕೊಂಡಿರುವ ಅಯ್ಯರ್ ಮತ್ತೆ ಡಿಸಿ ಸೇರಿಕೊಳ್ಳುವುದರಲ್ಲಿದ್ದಾರೆ.

Source: newsfirstlive.com Source link