ಪಂಜಾಬ್​ನಲ್ಲಿ ದಿಢೀರ್​​​​ ಪ್ರತ್ಯಕ್ಷವಾಯ್ತು ‘ಐ ಲವ್​​ ಪಾಕಿಸ್ತಾನ್​’ ಎಂಬ ಬಲೂನು ಮತ್ತು ಪಾಕ್​​​ ಧ್ವಜ

ಪಂಜಾಬ್​ನಲ್ಲಿ ದಿಢೀರ್​​​​ ಪ್ರತ್ಯಕ್ಷವಾಯ್ತು ‘ಐ ಲವ್​​ ಪಾಕಿಸ್ತಾನ್​’ ಎಂಬ ಬಲೂನು ಮತ್ತು ಪಾಕ್​​​ ಧ್ವಜ

ಚಂಡೀಗಡ: ಇಡೀ ದೇಶಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಈ ಹೊತ್ತಲೇ ಪಂಜಾಬಿನ ಹೊಲವೊಂದರಲ್ಲಿ ಪಾಕಿಸ್ತಾನದ ಬಾವುಟಗಳು ಪತ್ತೆಯಾಗಿವೆ. ಅಲ್ಲದೇ ಯಾರೋ ಕೆಲವು ಕಿಡಿಗೇಡಿಗಳು ಐ ಲವ್​ ಪಾಕಿಸ್ತಾನ್​ ಎಂಬ ಬರಹವುಳ್ಳ ಬಲೂನುಗಳು ಹೊಲದಲ್ಲಿ ಬಿಸಾಡಿ ಹೋಗಿದ್ದಾರೆ.

ಒಂದೆಡೆ ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದರೆ, ಇನ್ನೊಂದೆಡೆ ಮಧ್ಯಾಹ್ನ ದಿಢೀರ್​​ ಐ ಲವ್​​ ಪಾಕಿಸ್ತಾನ ಎಂಬ ಬಲೂನುಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ. ಪಂಜಾಬಿನ ರೂಪನಗರ ಜಿಲ್ಲೆಯ ಸಾಂಡೋಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಲ್ಲಾ ಆಯಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ನಿಗೂಢ ಎನಿಸುವ ರೀತಿಯಲ್ಲಿ ಪಾರಿವಾಳವೊಂದು ಭಾರತದ ಗಡಿಯೊಳಕ್ಕೆ ಹಾರಿ ಬಂದಿತ್ತು. ಭಾರತದ ಗಡಿಯೊಳಕ್ಕೆ ಹಾರಿ ಬಂದ ಪಕ್ಷಿ ಮತ್ಯಾವ ದೇಶದ್ದು ಅಲ್ಲ, ಬದಲಿಗೆ ಪಾಕಿಸ್ತಾನದ್ದು. ಇದನ್ನು ಭಾರತೀಯ ಸೇನಾಧಿಕಾರಿಗಳ ಸೆರೆ ಹಿಡಿದು ನೋಡಿದಾಗ ಪಾರಿವಾಳದ ಒಂದು ಕಾಲಲ್ಲಿ ಒಂದು ಉಂಗುರವಿತ್ತು. ಅದರಲ್ಲಿ ಒಂದು ಚೀಟಿ ಪತ್ತೆಯಾಗಿದ್ದು, ಇದರಲ್ಲಿ ಪಾಕಿಸ್ತಾನದ ಮೊಬೈಲ್​ ನಂಬರ್​ ಇರುವುದು ಕಂಡು ಬಂದಿತ್ತು. ಈ ಘಟನೆ ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆದಿತ್ತು.

ಇದನ್ನೂ ಓದಿ: ಪಾಕಿಸ್ತಾನದಿಂದ ಭಾರತಕ್ಕೆ ಚೀಟಿ​​​ ತಂದ ಪಾರಿವಾಳ; ಏನಿದರ ‘ನಂಬರ್’ ರಹಸ್ಯ?

Source: newsfirstlive.com Source link