ಸಂಜೀವ್ ಗಾಂಭೀರನಿಗೆ ಸರ್ಪ್ರೈಸ್ ನೀಡಿದ ವಿಕ್ರಾಂತ್​ ರೋಣ

ಸಂಜೀವ್ ಗಾಂಭೀರನಿಗೆ ಸರ್ಪ್ರೈಸ್ ನೀಡಿದ ವಿಕ್ರಾಂತ್​ ರೋಣ

ನಿನ್ನೆಯಷ್ಟೆ ವಿಕ್ರಾಂತ್​ ರೋಣ ಚಿತ್ರದಲ್ಲಿ ಸಂಜೀವ್ ಗಾಂಭೀರ ಪಾತ್ರ ನಿರ್ವಹಿಸುತ್ತಿರುವ ನಿರೂಪ್​ ಭಂಡಾರಿ 37 ನೇ ವಸಂತಕ್ಕೆ ಕಾಲಿಟಿದ್ರು. ಇನ್ನು ನಿರೂಪ್​ ಬರ್ತ್​ಡೇ ಸಲುವಾಗಿ ವಿಕ್ರಾಂತ್​ ರೋಣ ಚಿತ್ರ ತಂಡ ಸಂಜೀವ್​ ಗಾಂಭೀರ ಪಾತ್ರದ ಪೋಸ್ಟರ್​ ಕೂಡ ರಿಲೀಸ್​ ಮಾಡಿ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಇರುವ ಕುತೂಹವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

ಇನ್ನು ತಮ್ಮ ಬರ್ತ್​ಡೇ ಪ್ರಯುಕ್ತ ನಿರೂಪ್​ ಭಂಡಾರಿ ಮತ್ತು ಅವರ ಅಣ್ಣ ವಿಕ್ರಾಂತ್​ ರೋಣ ಚಿತ್ರದ ನಿರ್ದೇಶಕ ಅನೂಪ್​ ಭಂಡಾರಿ ಕಿಚ್ಚ ಸುದೀಪ್​ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಕಿಚ್ಚ ಸುದೀಪ್​ ನಿರೂಪ್​ಗೆ ಬರ್ತ್​ಡೇ ಸರ್ಪ್ರೈಸ್ ನೀಡಿದ್ದಾರೆ. ಸುದೀಪ್​ರ ಮನೆಯಲ್ಲೇ ನಿರೂಪ್​ ಕೇಕ್​ ಕತ್ತರಿಸಿ ಅವರ ಹುಟ್ಟಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಇನ್ನು ಈ ಬಗೆ ನಿರೂಪ್​ ಭಂಡಾರಿ ತಮ್ಮ ಸೊಶಿಯಲ್​ ಮೀಡಿಯಾ ಖಾತೆಯಲ್ಲಿ ಸುದೀಪ್​ ಮನೆಯಲ್ಲಿ ಬರ್ತ್​ಡೇ ಸೆಲೆಬ್ರೇಟ್ ಮಾಡಿದ ಪೋಟೋಗಳನ್ನು ಶೇರ್​ ಮಾಡಿ “ವಿಕ್ರಾಂತ್ ರೋಣ ಮನೆಯಲ್ಲಿ ಸಂಜೀವ್ ಗಾಂಭೀರ!!” ಎಂದು ಬರೆದುಕೊಂಡಿದ್ದಾರೆ.

Source: newsfirstlive.com Source link