ಸ್ವಾತಂತ್ರ್ಯ ದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಿಸಿದ ಭಾರತ್ ಎಲೆಕ್ಟ್ರಾನಿಕ್ಸ್

ಸ್ವಾತಂತ್ರ್ಯ ದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಿಸಿದ ಭಾರತ್ ಎಲೆಕ್ಟ್ರಾನಿಕ್ಸ್

ಬೆಂಗಳೂರು: ಭಾರತದ ನವರತ್ನ ರಕ್ಷಣಾ ಸಂಸ್ಥೆಯಾದ ಭಾರತ್ ಎಲೆಕ್ಟ್ರಾನಿಕ್ಸ್, ಜಾಲಹಳ್ಳಿ, ಬೆಂಗಳೂರು ಘಟಕ, ಇವರು ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

blank

ಸಂಸ್ಥೆಯ ಮುಖ್ಯದ್ವಾರದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ವಿನಯ ಕುಮಾರ್ ಕತ್ಯಾಲ್ ಧ್ವಜಾರೋಹಣ ಮಾಡಿದರು, ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಆರ್. ಪಿ. ಮೋಹನ್ ರವರ ಜೊತೆಗೆ ಕಾರ್ಯನಿರ್ವಾಹಕ ನಿರ್ದೇಶಕರುಗಳು, ಪ್ರಧಾನ ವ್ಯವಸ್ಥಾಪಕರುಗಳು, ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕಾರ್ಮಿಕ ಮುಖಂಡರು ಹಾಜರಿದ್ದರು. ದಿನಾಂಕ 07.08.2021 ರಂದು ನ್ಯಾಷನಲ್ ಹ್ಯಾಂಡ್ಲೂಮ್ ದಿನಾಚರಣೆಯ ಅಂಗವಾಗಿ ಒಂದು ವಾರಗಳ ಕಾಲ ಕರ್ನಾಟಕ ಖಾದಿ ಗ್ರಾಮೋದ್ಯಮದ ವತಿಯಿಂದ ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

blank

blank

blank

Source: newsfirstlive.com Source link