5 ವರ್ಷಗಳಲ್ಲಿ 335 ಮಹಿಳೆಯರ ಜೊತೆ ಡೇಟ್.. 365 ಟಾರ್ಗೆಟ್​.. ಕಾರಣ ಏನು ಗೊತ್ತಾ..?

5 ವರ್ಷಗಳಲ್ಲಿ 335 ಮಹಿಳೆಯರ ಜೊತೆ ಡೇಟ್.. 365 ಟಾರ್ಗೆಟ್​.. ಕಾರಣ ಏನು ಗೊತ್ತಾ..?

ಚೆನ್ನೈ: ಕಳೆದ ಐದೂವರೆ ವರ್ಷಗಳಿಂದ ಚೆನ್ನೈ ಮೂಲದ ಡ್ಯಾನ್ಸರ್ ಓರ್ವ ಬರೋಬ್ಬರಿ 335 ಮಹಿಳೆಯರ ಜೊತೆಗೆ ಡೇಟಿಂಗ್ ಮಾಡಿದ್ದಾನೆ. ಅಲ್ಲದೇ 365 ಮಹಿಳೆಯರನ್ನು ಡೇಟ್ ಮಾಡುವ ಉದ್ದೇಶವನ್ನ ಈ ಡ್ಯಾನ್ಸರ್ ಕಮ್ ಆ್ಯಕ್ಟರ್ ಇಟ್ಟುಕೊಂಡಿದ್ದಾನಂತೆ.
ಸುಂದರ್ ಬಾಬು ಹೆಸರಿನ ನಟ 2015 ರಲ್ಲಿ ಮಹಿಳೆಯರೊಂದಿಗೆ ಡೇಟಿಂಗ್ ಮಾಡುವ ವಿಶೇಷ ಅಭಿಯಾನವನ್ನ ಪ್ರಾರಂಭಿಸಿದ್ದಾನೆ. ಹಾಗಂತ ಈತ 335 ಮಹಿಳೆಯರೊಂದಿಗೆ ಡೇಟ್ ಮಾಡಿರುವುದು ತನಗೆ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಅಲ್ಲ. ಬದಲಿಗೆ ಮಹಿಳೆಯರಿಗೆ ತಮ್ಮ ಹಕ್ಕಿನ ಬಗ್ಗೆ ಅರಿವು ಮೂಡಿಸಲು.

blank

ಈ ಹಿಂದೆ ಅಂತಾರಾಷ್ಟ್ರೀಯ ಮಾಧ್ಯಮವೊಂದರ ಜೊತೆಗೆ ತಮ್ಮ ಡೇಟಿಂಗ್ ಅಭಿಯಾನದ ಬಗ್ಗೆ ಸುಂದರ್ ರಾಮು ಮಾತನಾಡಿದ್ದರು. ನಾನು ಬಾಲ್ಯದಲ್ಲಿದ್ದಾಗ ಮಹಿಳೆಯರನ್ನ ಸಮಾನವಾಗಿ ಗೌರವಿಸಲಾಗ್ತಾ ಇತ್ತು ಹಾಗೂ ಮನೆಯಲ್ಲೂ ಸಹ ಅವರನ್ನ ಗೌರವದಿಂದ ನಡೆಸಿಕೊಳ್ಳಲಾಗ್ತಾ ಇತ್ತು. ಶಾಲೆಯಲ್ಲೂ ಸಹ ಲಿಂಗಭೇದದ ಅನುಭವ ನನಗೆ ಆಗಲಿಲ್ಲ. ಆದರೆ ಜಗತ್ತನ್ನು ಸುತ್ತಲು ಪ್ರಾರಂಭಿಸಿದಾಗ ಮಹಿಳೆಯರು ಶೋಷಣೆಗೊಳಗಾಗಿರುವುದು ನನ್ನನ್ನು ಅಗಾಧ ನೋವಿಗೆ ತಳ್ಳಿದೆ ಎಂದು ಹೇಳಿದ್ದಾರೆ.

ಇನ್ನು 2012 ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ ಈ ಅಪರೂಪದ ಡೇಟಿಂಗ್ ಅಭಿಯಾನವನ್ನ ಸುಂದರ್ ರಾಮು ಪ್ರಾರಂಭಿಸಿದ್ದಾರಂತೆ. ಆ ಘಟನೆಯಿಂದ ಕೆಲವು ದಿನಗಳ ಕಾಲ ನನಗೆ ನಿದ್ದೆಯೇ ಹತ್ತಿರಲಿಲ್ಲ ಎಂದು ರಾಮು ಹೇಳಿಕೊಂಡಿದ್ದಾರೆ.

blank

ಈ ಅಭಿಯಾನದ ಪ್ರಕಾರ ಮಹಿಳೆಯರೇ ಸುಂದರ್ ರಾಮು ಅವರನ್ನ ಡೇಟಿಂಗ್​ಗೆ ಕರೆಯಬೇಕಂತೆ. ಅಲ್ಲದೇ ಲೊಕೇಷನ್​ನ್ನೂ ಸಹ ಮಹಿಳೆಯರೇ ಆಯ್ಕೆ ಮಾಡಿಕೊಂಡು ರಾತ್ರಿ ಊಟದ ಖರ್ಚನ್ನೂ ಮಹಿಳೆಯರೇ ಭರಿಸಬೇಕಂತೆ. ಇನ್ನು ಡೇಟಿಂಗ್​ ಖರ್ಚಿನಲ್ಲಿ ಉಳಿದ ಹಣವನ್ನು ಚಾರಿಟಿಗಳಿಗೆ ನೀಡಬೇಕಂತೆ. ಇನ್ನು ಈ ಅಭಿಯಾನ ಪ್ರಾರಂಭಿಸಿದ ನಂತರ ಸುಂದರ್ ರಾಮು ಅವರನ್ನ ಜನರು ಡೇಟಿಂಗ್ ಕಿಂಗ್, ದಿ 365 ಡೇಟ್ಸ್ ಮ್ಯಾನ್, ದಿ ಸೀರಿಯಲ್ ಡೇಟರ್ ಎಂದು ಕರೆಯಲು ಪ್ರಾರಂಭಿಸಿದ್ದಾರಂತೆ.

ರಾಮು ಡೇಟ್​ಗಾಗಿ ವಿಯೆಟ್ನಾಂ, ಸ್ಪೇನ್, ಫ್ರಾನ್ಸ್, ಅಮೆರಿಕಾ, ಥೈಲ್ಯಾಂಡ್, ಶ್ರೀಲಂಕಾ ದೇಶಗಳಿಗೂ ಪ್ರಯಾಣ ಬೆಳೆಸಿದ್ದಾರೆ. ತನ್ನ ಅಜ್ಜಿಯ ಜೊತೆಗೂ ಒಮ್ಮೆ ಡೇಟಿಂಗ್​ಗೆ ತೆರಳಿದ್ದು ಅದು ನನ್ನ ಮರೆಯಲಾರದ ಕ್ಷಣ ಅಂತ ರಾಮು ಹೇಳಿಕೊಂಡಿದ್ದಾರೆ. ಅಲ್ಲದೇ ತಮ್ಮ ಮನೆಯ ಕಸ ಸಂಗ್ರಹಿಸುವ ಮಹಿಳೆಯನ್ನೂ ರಾಮು ಒಮ್ಮೆ ಡೇಟ್​ಗೆ ಕರೆದುಕೊಂಡು ಹೋಗಿದ್ದರಂತೆ.

Source: newsfirstlive.com Source link