ರಾಯಚೂರಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ವಿ.ಸೋಮಣ್ಣ ಭೇಟಿ

ರಾಯಚೂರು: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆಯನ್ನೂ ಲೆಕ್ಕಿಸದೇ ನೆರೆ ಪೀಡಿತ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಕಳೆದ ಬಾರಿ ಪ್ರವಾಹ ಪೀಡಿತ ಪ್ರದೇಶಗಳ ಭೇಟಿ ರದ್ದುಗೊಳಿಸಿ ತುರ್ತು ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಹೀಗಾಗಿ ಮಳೆ ನಡುವೆಯೂ ಗ್ರಾಮಗಳಿಗೆ ಭೇಟಿ ನೀಡಿದರು.

ರಾಯಚೂರು ತಾಲೂಕಿನ ಅರಶಿಣಗಿ, ಗುರ್ಜಾಪುರ ಗ್ರಾಮದಲ್ಲಿ ಜನರ ಕಷ್ಟಗಳನ್ನ ಆಲಿಸಿದರು. ಸಂತ್ರಸ್ತರ ಅಸಮಧಾನ, ಆತಂಕಗಳಿಗೆ ಸ್ಪಂದಿಸಿ ಧೈರ್ಯ ತುಂಬಿದರು. ಒಂದೇ ಬಾರಿಗೆ ಎಲ್ಲಾ ಸಮಸ್ಯೆಗಳನ್ನ ಬಗೆಹರಿಸಲು ಸಾಧ್ಯವಿಲ್ಲ ಹಂತಹಂತವಾಗಿ ಪರಿಹಾರ ಕಾರ್ಯಗಳನ್ನ ಕೈಗೆತ್ತಿಕೊಳ್ಳುವುದಾಗಿ ಹೇಳಿದರು. ಪ್ರವಾಹ ಪೀಡಿತ ಗ್ರಾಮಗಳ ಸ್ಥಳಾಂತರ ಹಾಗೂ ವಸತಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಇದನ್ನೂ ಓದಿ: ಇಂದು 1,431 ಜನಕ್ಕೆ ಕೊರೊನಾ ಸೋಂಕು – ರಾಜ್ಯದಲ್ಲಿ 22,497 ಸಕ್ರಿಯ ಪ್ರಕರಣ

ಬಳಿಕ ದೇವಸುಗೂರು ಶ್ರೀಸುಗೂರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಸಚಿವ ಸೋಮಣ್ಣಗೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ಗ್ರಾಮಾಂತರ ಶಾಸಕರ ಬಸನಗೌಡ ದದ್ದಲ ಸಾಥ್ ನೀಡಿದರು. ಇದನ್ನೂ ಓದಿ: ಸಿರಾಜ್ ವಿಕೆಟ್ ಪಡೆದ ಬಳಿಕ ವಿಶೇಷ ಸಂಭ್ರಮಾಚರಣೆಯ ಕಹಾನಿ ರಿವೀಲ್

Source: publictv.in Source link