ಜಾರ್ಖಂಡ್​ ಜಡ್ಜ್ ಹತ್ಯೆ ಕೇಸ್; ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ ಘೋಷಿಸಿದ CBI

ಜಾರ್ಖಂಡ್​ ಜಡ್ಜ್ ಹತ್ಯೆ ಕೇಸ್; ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ ಘೋಷಿಸಿದ CBI

ಧನ್​ಬಾದ್: ಜಾರ್ಖಂಡದ ಧನ್​ಬಾದ್​ನ ನ್ಯಾಯಾಧೀಶ ಉತ್ತಮ್​ ಆನಂದ್​ ಹತ್ಯೆ ಪ್ರಕರಣ ಸಂಬಂಧ ಮಹತ್ವದ ಮಾಹಿತಿ ನೀಡಿದವರಿಗೆ 5 ಲಕ್ಷ ಗೌರವಧನ ನೀಡುವುದಾಗಿ ಕೇಂದ್ರೀಯ ತನಿಖಾ ದಳ ಘೋಷಿಸಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್​ ನ್ಯಾಯಾಧೀಶ ಉತ್ತಮ್​ ಆನಂದ್​ ಹತ್ಯೆ ತನಿಖೆ ಸರಿಯಾಗಿ ನಡೆಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿತ್ತು. ಈ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿರುವ ಸಿಬಿಐ, ಪ್ರಕರಣದ ಕುರಿತು ಮಹತ್ವದ ಮಾಹಿತಿ ನೀಡಿದವರಿಗೆ 5 ಲಕ್ಷ ರಿವಾರ್ಡ್​ ಕೊಡಲಾಗುವುದು ಎಂದು ತಿಳಿಸಿದೆ.

ಈ ಹಿಂದೆಯೇ ಸಿಬಿಐಗೆ ನೋಟಿಸ್​​ ನೀಡಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್​.ವಿ ರಮಣ ನೇತೃತ್ವದ ನ್ಯಾಯಪೀಠ ಅಸಮಾಧಾನ ಹೊರಹಾಕಿತ್ತು. ಸಿಬಿಐ ನಡೆ ಸರಿಯಲ್ಲ ಎಂದು ಚಾಟಿ ಬೀಸಿತ್ತು. ಪ್ರಕರಣದ ತನಿಖೆ ವೇಳೆ ಎನ್.ವಿ ರಮಣ ಕೆಲವು ಪ್ರಮುಖ ವಿಚಾರಗಳನ್ನು ಮುಂದಿಟ್ಟು ಸಿಬಿಐಗೆ ತರಾಟೆ ತೆಗೆದುಕೊಂಡಿದ್ದರು.

ಇತ್ತೀಚೆಗೆ ಮೂರು ವಾರಗಳ ಹಿಂದೆ ಜುಲೈ 28ರಂದು ಬೆಳಿಗ್ಗೆ ನ್ಯಾಯಾಧೀಶ ಉತ್ತಮ ಆನಂದ್​ ಅವರು, ವಾಕಿಂಗ್ ಹೋಗಿದ್ದ ಸಂದರ್ಭದಲ್ಲಿ, ವಾಹನವೊಂದು ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಇದರ ಸಿಸಿಟಿವಿ ದೃಶ್ಯ ಸೆರೆಯಾಗಿದ್ದು, ಅಪರಿಚಿತ ಆಟೋ​ ಉದ್ದೇಶಪೂರ್ವಕವಾಗಿ ಉತ್ತಮ್ ಆ​ನಂದ್​ ಅವರಿಗೆ ಡಿಕ್ಕಿ ಹೊಡೆದಿದೆ ಎಂದು ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಇದನ್ನೂ ಓದಿ: ಜಾರ್ಖಂಡ್​ ನ್ಯಾಯಾಧೀಶರ ಸಾವಿನ ಪ್ರಕರಣ; 243 ರೌಡಿಗಳ ವಿಚಾರಣೆ, 250 ಆಟೋಗಳು ಸೀಜ್​​​

Source: newsfirstlive.com Source link