ತಾಲಿಬಾನಿಗಳ ಕೈಗೆ ಜಾರಿದ ಅಫ್ಘಾನಿಸ್ತಾನ; ರಾಜೀನಾಮೆ ಕೊಟ್ಟು ದೇಶಬಿಟ್ಟ ಅಧ್ಯಕ್ಷ ಅಶ್ರಫ್ ಗನಿ

ತಾಲಿಬಾನಿಗಳ ಕೈಗೆ ಜಾರಿದ ಅಫ್ಘಾನಿಸ್ತಾನ; ರಾಜೀನಾಮೆ ಕೊಟ್ಟು ದೇಶಬಿಟ್ಟ ಅಧ್ಯಕ್ಷ ಅಶ್ರಫ್ ಗನಿ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನ್ನು ತಾಲಿಬಾನಿಗಳು ಸುತ್ತುವರಿದು ವಶಪಡಿಸಿಕೊಂಡ ಬೆನ್ನಲ್ಲೇ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಗನಿ ತನ್ನ ದೇಶದಿಂದ ಬೇರೊಂದು ದೇಶಕ್ಕೆ ಪಲಾಯನ ಮಾಡಿದ್ದಾರೆ. ಅಶ್ರಫ್ ಗನಿ ಜೊತೆಗೆ ವಿಶೇಷ ಕಾರ್ಯದರ್ಶಿ ಫಜೆಲ್ ಫಾಜ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಹಮ್​ದುಲ್ಲಾ ಮೊಹಿಬ್, ಉಪರಾಷ್ಟ್ರಪತಿ ಅಮ್ರುಲ್ಲಾ ಸಲೇಹ್ ಸೇರಿದಂತೆ ಹಲವು ಪ್ರಮುಖ ನಾಯಕರೂ ಸಹ ಅಶ್ರಫ್ ಗನಿ ಜೊತೆಗೆ ಪಲಾಯನಗೈದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ತಾಲಿಬಾನಿಗಳ ವಶ; ಅಶ್ರಫ್ ಗನಿ ರಾಜೀನಾಮೆ

blank

ಮೂಲಗಳ ಪ್ರಕಾರ ಈ ನಾಯಕರೆಲ್ಲರೂ ತಜಿಕಿಸ್ತಾನ್​ಗೆ ಪಲಾಯನಗೈದಿದ್ದಾರೆ ಎನ್ನಲಾಗಿದ್ದು ಯಾವ ದೇಶಕ್ಕೆ ತೆರಳಿದ್ದಾರೆ ಎಂಬುದು ನಿಖರವಾಗಿಲ್ಲ. ತಾಲಿಬಾನಿಗಳು ಕಾಬೂಲ್​ ವಶಪಡಿಸಿಕೊಳ್ಳುತ್ತಿದ್ದಂತೆಯೇ ನಾಯಕರು ಪಲಾಯನಗೈದಿದ್ದಾರೆ.

ಇದನ್ನೂ ಓದಿ: ಅಶ್ರಫ್ ಗನಿ ರಾಜೀನಾಮೆ; ಅಫ್ಘಾನಿಸ್ತಾನ​​​ ಮುಂದಿನ ಅಧ್ಯಕ್ಷ ಮುಲ್ಲಾ ಬರಾದರ್

blank

ಇನ್ನು ಅಫ್ಘಾನಿಸ್ತಾನ ಇಂದು ಶಾಂತಿಯುತವಾಗಿ ತಾಲಿಬಾನಿಗಳಿಗೆ ಅಧಿಕಾರವನ್ನು ಹಸ್ತಾಂತರ ಮಾಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಅಧ್ಯಕ್ಷ ಅಶ್ರಫ್ ಗನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಅಥವಾ ನಾಳೆ ತಾಲಿಬಾನಿಗಳ ಸರ್ಕಾರ ಅಫ್ಘಾನಿಸ್ತಾನದಲ್ಲಿ ರಚನೆಯಾಗಲಿದ್ದು ತಾಲಿಬಾನಿ ನಾಯಕ ಮುಲ್ಲಾ ಬರಾದರ್ ಗನಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳು ದಟ್ಟವಾಗಿವೆ.

Source: newsfirstlive.com Source link