ಧ್ವಜಾರೋಹಣ ಕಾರ್ಯಕ್ರಮಕ್ಕೆ ಗೋ ಮಾತೆ ಎಂಟ್ರಿ

ಗದಗ: 75ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಆಕಳು ಪಾಲ್ಗೊಂಡು ನೆರೆದಿದ್ದ ಜನರನ್ನು ಆಶ್ಚರ್ಯಚಕಿತಗೊಳಿಸಿರುವ ಘಟನೆ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ನಡೆದಿದೆ.

ಮುಳಗುಂದ ಪಟ್ಟಣದ ಗಾಂಧೀಜಿ ಕಟ್ಟೆ ಬಳಿ ಧ್ವಜಾರೋಹಣ ನಡೆಯುತ್ತಿತ್ತು. ಮುಳಗುಂದ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಪಟ್ಟಣ ಪಂಚಾಯತ್ ಅಧಿಕಾರಿ, ಸಿಬ್ಬಂದಿ ಹಾಗೂ ನೂರಾರು ಜನ ಸಾರ್ವಜನಿಕರು ಪಾಲ್ಗೊಂಡಿದ್ದರು. ಅವರ ಮಧ್ಯೆಯೇ ನುಗ್ಗಿ ಧ್ವಜದ ಗಾಂಧೀಜಿ ಕಟ್ಟೆಗೆ ಆಕಳು ಬಂದಿದೆ. ಅಲ್ಲಿದ್ದ ಜವರು ಈ ಆಕಳು ಓಡಿಸಲು ಎಷ್ಟೇ ಪ್ರಯತ್ನ ಪಟ್ಟರು ಅಲ್ಲಿಂದ ಕದಲಲಿಲ್ಲ. ಸುಮಾರು ಅರ್ಧ ಗಂಟೆ ಆಕಳು ಓಡಿಸಲು ನೆರೆದವರು ಹರಸಾಹಸ ಪಟ್ಟರು. ಆದರೂ ಗೋ ಮಾತೆ ಮಾತ್ರ ಧ್ವಜಾರೋಹಣ ಮುಗಿಯುವವರೆಗೂ ಅಲ್ಲಿಂದ ಹೋಗಲಿಲ್ಲ. ಇದನ್ನೂ ಓದಿ: ಹರಿದ ಧ್ವಜ ಹಾರಿಸಿ ರಾಷ್ಟ್ರಧ್ವಜಕ್ಕೆ ಅವಮಾನಿಸಿದ ಕಾರವಾರದ ನೌಕಾದಳ

ಗೋ ಮಾತೆ ಕೂಡಾ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿತು. ನೆರೆದವರನ್ನು ಗೋವಿನ ದೇಶ ಭಕ್ತಿ ಕಂಡು ಆಶ್ಚರ್ಯಚಕಿತರನ್ನಾಗಿ ಮಾಡಿತು. ನಂತರ ಎಲ್ಲರೂ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸುವುದರ ಜೊತೆಗೆ ಗೋವಿಗೆ ನಮಸ್ಕರಿಸಿ ಹೊರಟರು.

Source: publictv.in Source link