‘ಜನರೇ ಹೆದರಬೇಡಿ.. ಕಾಬೂಲ್​ ನಗರಕ್ಕೆ ಎಂಟ್ರಿ ಕೊಡ್ತಿದ್ದೇವೆ’- ಯೂ ಟರ್ನ್ ಹೊಡೆದ ತಾಲಿಬಾನಿಗಳು

‘ಜನರೇ ಹೆದರಬೇಡಿ.. ಕಾಬೂಲ್​ ನಗರಕ್ಕೆ ಎಂಟ್ರಿ ಕೊಡ್ತಿದ್ದೇವೆ’- ಯೂ ಟರ್ನ್ ಹೊಡೆದ ತಾಲಿಬಾನಿಗಳು

ತಾಲಿಬಾನಿಗಳು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನ್ನು ವಶಪಡಿಸಿಕೊಂಡ ಬೆನ್ನಲ್ಲೇ ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವಂತೆ ಅಫ್ಘಾನಿಸ್ತಾನ್ ಸರ್ಕಾರಕ್ಕೆ ಹೇಳಿತ್ತು. ಅಲ್ಲಿಯವರೆಗೂ ಕಾಬೂಲ್​ ನಗರದ ಒಳಗೆ ಎಂಟ್ರಿಯಾಗೋದಿಲ್ಲ ಎಂದು ಮಾತು ಕೊಟ್ಟಿತ್ತು. ಇದೀಗ ಯೂಟರ್ನ್ ಹೊಡೆದಿರುವ ತಾಲಿಬಾನಿಗಳು ನಗರದೊಳಗೆ ಎಂಟ್ರಿಯಾಗೋದಾಗಿ ಪ್ರಕಟಣೆ ಹೊರಡಿಸಿದ್ದಾರೆ.

blank

ಇಂದು ಬೆಳಗ್ಗೆ ತಾಲಿಬಾನಿಗಳು ಅಫ್ಘಾನ್ ಸರ್ಕಾರಕ್ಕೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವಂತೆ ಹೇಳಿದ್ದರು. ಇದಾದ ಬೆನ್ನಲ್ಲೇ ಹಲವು ಬೆಳವಣಿಗೆಗಳು ಕಾಬೂಲ್​ನಲ್ಲಿ ನಡೆದಿವೆ. ಕಾಬೂಲ್​ನಲ್ಲಿ ಸಿಲುಕಿದ ತಮ್ಮ ದೇಶದ ಜನಗಳನ್ನು ವಿದೇಶಿ ಸರ್ಕಾರಗಳು ವಿಮಾನಗಳ ಮೂಲಕ ಏರ್​ಲಿಫ್ಟ್ ಮಾಡುತ್ತಿವೆ. ಸಾವಿರಾರು ಜನರು ದೇಶ ತೊರೆಯಲು ಏರ್​ಪೋರ್ಟ್​ನತ್ತ ಪ್ರಯಾಣ ಬೆಳೆಸಿದ್ದಾರೆ.

blank

ಸ್ವತಃ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಗನಿ ರಾಜೀನಾಮೆ ಕೊಟ್ಟು ದೇಶದಿಂದ ಬೇರೊಂದು ದೇಶಕ್ಕೆ ಪಲಾಯನ ಮಾಡಿದ್ದಾರೆ. ರಾಯಭಾರಿ ಕಚೇರಿಯ ಅಧಿಕಾರಿ, ಸಿಬ್ಬಂದಿಯನ್ನ ತಮ್ಮ ತಮ್ಮ ದೇಶಗಳು ವಾಪಸ್ ಕರೆಸಿಕೊಂಡಿವೆ.

ಇದನ್ನೂ ಓದಿ: ತಾಲಿಬಾನಿಗಳ ಕೈಗೆ ಜಾರಿದ ಅಫ್ಘಾನಿಸ್ತಾನ; ರಾಜೀನಾಮೆ ಕೊಟ್ಟು ದೇಶಬಿಟ್ಟ ಅಧ್ಯಕ್ಷ ಅಶ್ರಫ್ ಗನಿ

ಇದೀಗ ಯೂಟರ್ನ್ ಹೊಡೆದಿರುವ ತಾಲಿಬಾನಿಗಳು ಕಾಬೂಲ್ ನಗರದ ಒಳಗೆ ಪ್ರವೇಶಿಸುವುದಾಗಿ ಹೇಳಿದ್ದಾರೆ. ನಗರದೊಳಗೆ ಸಾಮಾನ್ಯ ಜನರಿಗೆ ಕಳ್ಳತನಗಳು, ಹಲ್ಲೆಗಳಿಂದ ಸಮಸ್ಯೆಯಾಗಬಹುದೆಂಬ ಕಾರಣಕ್ಕೆ ನಗರದೊಳಗೆ ಪ್ರವೇಶಿಸುತ್ತಿದ್ದೇವೆ.. ಜನರು ಹೆದರುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

Source: newsfirstlive.com Source link