ಲೈನ್​ಮನ್​ಗಳನ್ನ ಮನೆಗೆ ಕರೆಸಿ ಜೊತೆಯಲ್ಲೇ ಭೋಜನ ಸವಿದ ಇಂಧನ ಸಚಿವ.. ಯಾಕೆ ಗೊತ್ತಾ..?

ಲೈನ್​ಮನ್​ಗಳನ್ನ ಮನೆಗೆ ಕರೆಸಿ ಜೊತೆಯಲ್ಲೇ ಭೋಜನ ಸವಿದ ಇಂಧನ ಸಚಿವ.. ಯಾಕೆ ಗೊತ್ತಾ..?

ಉಡುಪಿ: ಇಂಧನ ಸಚಿವ ಸುನೀಲ್ ಕುಮಾರ್‌ ಅವರಿಗೆ ಇಂದು ಸ್ವಾತಂತ್ರ್ಯ ದಿನಾಚರಣೆ ಜೊತೆಗೆ, ಹುಟ್ಟು ಹಬ್ಬದ ಸಂಭ್ರಮ. ಸಚಿವರಾದ ಬಳಿಕ ಮೊದಲ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸದೇ ವಿಶೇಷವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.

blank

ತಮ್ಮ ಹುಟ್ಟೂರು, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ, ಎಲ್ಲ ಲೈನ್ ಮ್ಯಾನ್‌ಗಳನ್ನು ತಮ್ಮ ಮನೆಗೆ ಆಹ್ವಾನಿಸಿ, ಅವರೊಂದಿಗೆ ಊಟ ಮಾಡಿದ್ದಾರೆ. ತಮ್ಮ ಹುಟ್ಟು ಹಬ್ಬದ ನಿಮಿತ್ತ ಲೈನ್ ಮ್ಯಾನ್‌ಗಳಿಗೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಲೈನ್ ಮ್ಯಾನ್‌ಗಳ ಮಧ್ಯೆ ಕುಳಿತು ಊಟ ಮಾಡಿದ್ದು, ಮಾತ್ರವಲ್ಲದೇ ಊಟ ಮಾಡುತ್ತಾ ಅವರ ಸಮಸ್ಯೆಯನ್ನು ಆಲಿಸಿದ್ದಾರೆ. ಸಚಿವರ ವಿಭಿನ್ನ ಹುಟ್ಟು ಹಬ್ಬ ಆಚರಣೆ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ.

 

Source: newsfirstlive.com Source link