ಮದುವೆ ನಂತರದ ಬಲವಂತದ ಲೈಂಗಿಕ ಕ್ರಿಯೆ ಕಾನೂನುಬಾಹಿರ ಎನ್ನಲಾಗದು; ಮುಂಬೈ ಕೋರ್ಟ್​

ಮದುವೆ ನಂತರದ ಬಲವಂತದ ಲೈಂಗಿಕ ಕ್ರಿಯೆ ಕಾನೂನುಬಾಹಿರ ಎನ್ನಲಾಗದು; ಮುಂಬೈ ಕೋರ್ಟ್​

ಮುಂಬೈ: ಮದುವೆ ನಂತರ ಬಲವಂತದ ಲೈಂಗಿಕ ಕ್ರಿಯೆ ಕಾನೂನುಬಾಹಿರ ಎಂದು ಹೇಳಲಾಗುವುದಿಲ್ಲ ಎಂದು ಮುಂಬೈ ಹೆಚ್ಚುವರಿ ಸೆಷನ್ಸ್ ಕೋರ್ಟ್​​ ಅಭಿಪ್ರಾಯಪಟ್ಟಿದೆ. ಮಹಿಳೆಯೊಬ್ಬರು ತನ್ನ ಗಂಡ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಆರೋಪಿಸಿ ಕೋರ್ಟ್​ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮುಂಬೈ ಹೆಚ್ಚುವರಿ ಸೆಷನ್ಸ್ ಕೋರ್ಟ್​ ನ್ಯಾಯಾಧೀಶರಾದ ಸಂಜಶ್ರೀ ಜೆ ಘರತ್ ಅವರು, ಇದು ಕಾನೂನುಬಾಹಿರ ಎಂದು ಹೇಳಲಾಗುವುದಿಲ್ಲ ಎಂದಿದ್ದಾರೆ.

ಪ್ರಕರಣದ ಆರೋಪಿ ಪತಿಯಾಗಿರುವುದರಿಂದ ಇದು ಕಾನೂನು ಪರಿಶೀಲನೆಗೆ ಒಳಪಡುವುದಿಲ್ಲ. ಮದುವೆಯಾದ ಬಳಿಕ ಪತಿಯಾಗಲೀ, ಪತ್ನಿಯಾಗಲೀ ಬಲವಂತದ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಆರೋಪಿಸಿದಲ್ಲಿ ಇದು ಕಾನೂನುಬಾಹಿರ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರಾದ ಸಂಜಶ್ರೀ ಜೆ ಘರತ್ ಅಭಿಪ್ರಾಯಪಟ್ಟಿದ್ದಾರೆ.

ಕೋರ್ಟ್​ ಮೊರೆ ಹೋಗಿರುವ ಮಹಿಳೆ ಕಳೆದ ವರ್ಷ 2020 ನವೆಂಬರ್​​ 22ನೇ ತಾರೀಕಿನಂದು ಮದುವೆಯಾಗಿದ್ದರು. ಮದುವೆಯಾದ ಬಳಿಕ ಮಹಿಳಾ ದಂಪತಿ ಮುಂಬೈ ಸಮೀಪದ ಗಿರಿಧಾಮವಾದ ಮಹಾಬಲೇಶ್ವರಕ್ಕೆ ಹೋಗಿದ್ದರು. ಇಲ್ಲಿ ಮಹಿಳೆ ಮತ್ತು ಗಂಡನ ನಡುವೆ ಲೈಗಿಕ ಸಂಪರ್ಕ ನಡೆದಿದೆ. ಇದಾದ ಬಳಿಕ ಮಹಿಳೆ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾಳೆ. ಈ ವೇಳೆ ವೈದ್ಯರ ಪರೀಕ್ಷೆ ವೇಳೆ ಮಹಿಳೆ ಸೊಂಟದ ಕೆಳಗೆ ಪಾರ್ಶ್ವವಾಯು ಇದೆ ಎಂದು ತಿಳಿದು ಬಂದಿದೆ.

ಗಂಡನ ವಿರುದ್ಧ ಎಫ್​​ಐಆರ್

ಇದಾದ ಬಳಿಕ ಮಹಿಳೆ ತನ್ನ ಪತಿ ಮತ್ತು ಕುಟುಂಬಸ್ಥರ ವಿರುದ್ಧ ಮುಂಬೈ ಪೊಲೀಸ್​ ಠಾಣೆಯೊಂದರಲ್ಲಿ ಎಎಫ್​​ಐ ಮಾಡಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ಗಂಡ ಮತ್ತು ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಇತ್ತು ಎಂದು ಆರೋಪಿಸಿದ್ದರು.

ಗಂಡ ಮತ್ತವರ ಕುಟುಂಬ ಹೊಣೆಯಲ್ಲ

ಈಗ ಮುಂಬೈ ಹೆಚ್ಚುವರಿ ಸೆಷನ್ಸ್ ಕೋರ್ಟ್​ ನ್ಯಾಯಾಧೀಶರಾದ ಸಂಜಶ್ರೀ ಜೆ ಘರತ್ ಈ ಪ್ರಕರಣದ ವಿಚಾರಣೆ ವೇಳೆ ಹಲವು ವಿಚಾರಗಳನ್ನು ಹೇಳಿದ್ದಾರೆ. ಯುವತಿ ಪಾರ್ಶ್ವವಾಯುವಿಗೆ ತುತ್ತಾಗಿರುವುದು ದುರದೃಷ್ಟಕರ. ಇದಕ್ಕೆ ಗಂಡ ಮತ್ತವರ ಕುಟುಂಬ ಹೊಣೆ ಎಂದು ಹೇಳಲು ಸಾಧ್ಯವಿಲ್ಲ. ಇವರ ವಿರುದ್ಧ ಮಹಿಳೆ ಮಾಡಿದ ಆರೋಪದ ಸ್ವರೂಪ ಗಮನಿಸಿದರೆ ಕಸ್ಟಡಿ ವಿಚಾರಣೆ ಅಗತ್ಯವಿಲ್ಲ ಎಂದು ಆದೇಶಿಸಿದರು.

ಇದನ್ನೂ ಓದಿ: ಅಶ್ರಫ್ ಗನಿ ರಾಜೀನಾಮೆ; ಅಫ್ಘಾನಿಸ್ತಾನ​​​ ಮುಂದಿನ ಅಧ್ಯಕ್ಷ ಮುಲ್ಲಾ ಬರಾದರ್

Source: newsfirstlive.com Source link