ಸಿದ್ದರಾಮಯ್ಯ ಕಾಲಜ್ಞಾನಿಯಲ್ಲ, ಅವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ: ಸಿ.ಟಿ.ರವಿ ವ್ಯಂಗ್ಯ

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಜ್ಞಾನಿಯಲ್ಲ. ಅವರು ಏನನ್ನ ಹೇಳಿದರೂ ಅದು ಉಲ್ಟಾ ಆಗುತ್ತೆ. ಅವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ನಗರದ ಪ್ರೆಸ್ ಕ್ಲಬ್‍ನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಅಪ್ಪನಾಣೆ ಮೋದಿ ಪ್ರಧಾನಿ ಆಗಲ್ಲ ಅಂತ ಹೇಳಿದ್ದರು. ಆದರೆ ಮೋದಿ ಎರಡು ಬಾರಿ ಪ್ರಧಾನಿ ಆದರು. ಅವರು ಏನು ಹೇಳಿದ್ರು. ಅಪ್ಪನಾಣೆ ಆಗಲ್ಲ ಅಂತ ಹೇಳಿದ್ದರು. ಅವರು ಏನು ಹೇಳುತ್ತಾರೋ ಅದು ಉಲ್ಟಾ ಆಗುತ್ತೆ. ನಾನು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇನೆ ಎಂದು ಹೇಳಿದ್ದರು. ಬಂದರಾ ಎಂದು ಮರು ಪ್ರಶ್ನೆ ಹಾಕಿದರು. 2018ರ ಚುನಾವಣೆಯ ಭಾಷಣವನ್ನ ನೀವು ನೆನಪಿಸಿಕೊಳ್ಳಿ ಎಂದರು.

ಸಿದ್ದರಾಮಯ್ಯನವರು ಏನು ಹೇಳುತ್ತಾರೋ ಅದಕ್ಕೆ ತದ್ವಿರುದ್ಧ ಆಗುತ್ತೆ. ಅವರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂದರೆ ನೂರಕ್ಕೆ ನೂರು ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. ಅವರು ಬಿಜೆಪಿ ಉಳಿಯಲ್ಲ ಅಂದರೆ ಈ ಅವಧಿ ಮುಗಿಸಿ ಮುಂದಿನ ಐದು ವರ್ಷಕ್ಕೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದರು. ಹಾಗಾಗಿ ಕೆಲವರ ಬಾಯಲ್ಲಿ ಮಚ್ಚೆ ಇರುತ್ತೆ ಎಂದು ಹೇಳುತ್ತಾರೆ. ಯಾಕಂದರೆ, ಅವರು ಹೇಳಿದ್ದು ನಿಜವಾಗುತ್ತೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯನವರು ಏನು ಹೇಳುತ್ತಾರೋ ಅದು ಉಲ್ಟಾ ಆಗುತ್ತೆ ಅಂದರೆ ಅವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ ಅದಕ್ಕೆ ಎಲ್ಲವೂ ಉಲ್ಟಾ ಆಗುತ್ತೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ತಂದೆ ಯಾರೆಂದು ಅನುಮಾನ ಇರೋರು ಸಾವರ್ಕರ್ ಯಾರೆಂದು ಕೇಳುತ್ತಾರೆ: ಸಿ.ಟಿ.ರವಿ

Source: publictv.in Source link