ಮೂರೂ ಸೇನೆಗಳು ಯಾವುದೇ ಸಮಯದಲ್ಲಿ ಎಂಥದ್ದೇ ಸವಾಲಿಗೂ ರೆಡಿಯಾಗಿರಿ- ರಕ್ಷಣಾ ಸಚಿವರ ಕರೆ

ಮೂರೂ ಸೇನೆಗಳು ಯಾವುದೇ ಸಮಯದಲ್ಲಿ ಎಂಥದ್ದೇ ಸವಾಲಿಗೂ ರೆಡಿಯಾಗಿರಿ- ರಕ್ಷಣಾ ಸಚಿವರ ಕರೆ

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ದಿನವಾದ ಇಂದು ಶಸ್ತ್ರಾಸ್ತ್ರ ಪಡೆಗಳನ್ನ ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಸನ್ನಿವೇಶದಲ್ಲಿ ಭದ್ರತೆಯ ಆಯಾಮಗಳು ನಿರಂತರವಾಗಿ ಬದಲಾಗುತ್ತಿರುತ್ತವೆ ಮತ್ತು ಮೂರೂ ಸೇನೆಗಳು ತಮ್ಮ ಮುಂದೆ ಬರುವ ಯಾವುದೇ ಸವಾಲಿಗೆ ಸಿದ್ಧರಾಗಿರಬೇಕು ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶ ; ರಾಜೀನಾಮೆ ಕೊಟ್ಟು ದೇಶಬಿಟ್ಟ ಅಧ್ಯಕ್ಷ ಅಶ್ರಫ್ ಗನಿ

ನಾನು ಈ ಮೂಲಕ ನೀವು ಯಾವುದೇ ಸಂದರ್ಭದಲ್ಲೂ ಎಂಥದ್ದೇ ಸವಾಲಿಗೂ ತಯಾರಿರಬೇಕೆಂದು ಕರೆ ನೀಡುತ್ತೇನೆ. ನಿಮಗೆ ಭರವಸೆ ನೀಡುತ್ತೇನೆ.. ಸರ್ಕಾರ ನಿಮ್ಮ ಪ್ರೀತಿ ಪಾತ್ರರನ್ನ ಭೇಟಿಯಾಗುತ್ತದೆ ಮತ್ತು ಅವರ ಬೇಡಿಕೆಗಳನ್ನು ಈಡೇರಿಸುತ್ತದೆ. ಅಹಿಂಸೆಯೇ ನಮ್ಮ ಪರಮಧರ್ಮವಾದರೂ ದೇಶದ ರಕ್ಷಣೆಯೂ ಸಹ ಅಷ್ಟೇ ಮುಖ್ಯವಾದುದು. ದೇಶದ ರಕ್ಷಣೆಗಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧರಿರಬೇಕಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ‘ಜನರೇ ಹೆದರಬೇಡಿ.. ಕಾಬೂಲ್​ ನಗರಕ್ಕೆ ಎಂಟ್ರಿ ಕೊಡ್ತಿದ್ದೇವೆ’- ಯೂ ಟರ್ನ್ ಹೊಡೆದ ತಾಲಿಬಾನಿಗಳು

ದೇಶದಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಲು ನೀವು ಎಚ್ಚರದಿಂದಿರುವುದು ಅನಿವಾರ್ಯ.. ಜಲಮಾರ್ಗ, ವಾಯುಮಾರ್ಗ ಅಥವಾ ನೆಲಮಾರ್ಗವೂ ಸೇರಿದಂತೆ ಎಲ್ಲೆಡೆ ನಾವು ಎಚ್ಚರದಿಂದಿರರಬೇಕಿದೆ.

ಫೆಬ್ರವರಿ 2021 ರಿಂದ ಗಡಿಯಲ್ಲಿ ಯುದ್ದವಿರಾಮ ಉಲ್ಲಂಘನೆ ಸಂಖ್ಯೆ ಕಡಿಮೆಯಾಗಿವೆ. ಪ್ಯಾರಾ ಮಿಲಿಟರಿ ಫೋರ್ಸ್ ಮತ್ತು ಶಸ್ತ್ರಾಸ್ತ್ರ ಪಡೆಗಳಿಂದಾಗಿ ಒಳನುಸುವಿಕೆಯೂ ನಿಂತಿದೆ ಎಂದು ಇದೇ ವೇಳೆ ರಾಜನಾಥ್ ಸಿಂಗ್ ಹೇಳಿದ್ದಾರೆ.

Source: newsfirstlive.com Source link