ಆಫ್ಘಾನ್​ ಅಧ್ಯಕ್ಷರ ಪ್ಯಾಲೇಸ್ ವಶಕ್ಕೆ ಪಡೆದ ತಾಲಿಬಾನಿಗಳು.. ಸರ್ಕಾರ ರಚನೆ ಮಾಡಲು ತಯಾರಿ

ಆಫ್ಘಾನ್​ ಅಧ್ಯಕ್ಷರ ಪ್ಯಾಲೇಸ್ ವಶಕ್ಕೆ ಪಡೆದ ತಾಲಿಬಾನಿಗಳು.. ಸರ್ಕಾರ ರಚನೆ ಮಾಡಲು ತಯಾರಿ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ ವಶಪಡಿಸಿಕೊಂಡಿದ್ದ ತಾಲಿಬಾನಿಗಳು ಇದೀಗ ಅಲ್ಲಿನ ಅಧ್ಯಕ್ಷರ ಪ್ಯಾಲೇಸ್​ನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಕಾಬೂಲ್​ ವಶಪಡಿಸಿಕೊಳ್ಳಲು ಮುಂದಾದ 24 ಗಂಟೆಗಳಲ್ಲೇ ತಾಲಿಬಾನ್ ತನ್ನ ಗುರಿಯನ್ನು ತಲುಪಿದೆ. ಅಲ್ಲದೇ ಕಾಬೂಲ್​ನ ಪೊಲೀಸ್ ಹೆಡ್​ಕ್ವಾಟ್ರಸ್ ಕೂಡ ಈಗ ತಾಲಿಬಾನಿಗಳ ಪಾಲಾಗಿದೆ.

ಇನ್ನು ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಗನಿ ದೇಶದಿಂದ ಪಲಾಯನಗೊಂಡಿದ್ದಾರೆ. ಬಹುತೇಕ ನಾಳೆ ಅಫ್ಘಾನಿಸ್ತಾನದ ಅಧಿಕಾರವನ್ನ ತಾಲಿಬಾನಿಗಳು ತಮ್ಮ ಕೈವಶ ಮಾಡಿಕೊಳ್ಳುವ ಸಾಧ್ಯತೆ ಇದ್ದು ಸರ್ಕಾರ ರಚಿಸುವ ತರಾತುರಿಯಲ್ಲಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶ ; ರಾಜೀನಾಮೆ ಕೊಟ್ಟು ದೇಶಬಿಟ್ಟ ಅಧ್ಯಕ್ಷ ಅಶ್ರಫ್ ಗನಿ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನ್ನು ತಾಲಿಬಾನಿಗಳು ವಶಪಡಿಸಿಕೊಳ್ಳತ್ತಲೇ ಏರ್ ಇಂಡಿಯಾ ವಿಮಾನದ ಮೂಲಕ ಆಫ್ಘಾನ್​ನಿಂದ 129 ಪ್ರಯಾಣಿಕರು ದೆಹಲಿಗೆ ಬಂದಿಳಿದಿದ್ದಾರೆ. ಈ ಪೈಕಿ ಅಲ್ಲಿನ ಮಾಜಿ ಸಂಸದ ಜಮಿಲ್ ಕರ್ಜಾಯಿ ಕೂಡ ದೆಹಲಿಗೆ ಬಂದಿಳಿದಿದ್ದಾರೆ.

ಇದನ್ನೂ ಓದಿ: ಅಶ್ರಫ್ ಗನಿ ರಾಜೀನಾಮೆ; ಅಫ್ಘಾನಿಸ್ತಾನ​​​ ಮುಂದಿನ ಅಧ್ಯಕ್ಷ ಮುಲ್ಲಾ ಬರಾದರ್

ಈ ವೇಳೆ ಹೇಳಿಕೆ ನೀಡಿದ ಕರ್ಜಾಯಿ.. ನಾನು ನಗರ ಬಿಟ್ಟು ತೆರಳಿದಾಗ ತಾಲಿಬಾನಿಗಳು ಕಾಬೂಲ್​ನ್ನು ಆಕ್ರಮಿಸಿಕೊಂಡಿದ್ದರು. ಅಲ್ಲಿ ಹೊಸ ಸರ್ಕಾರ ರಚನೆಯಾಗತ್ತದೆ ಎಂದುಕೊಂಡಿದ್ದೇನೆ. ಅಲ್ಲಿ ಏನೇ ಆಗಿದ್ದರೂ ಅದು ಅಶ್ರಫ್ ಗನಿಯಿಂದಲೇ ಆಗಿದೆ. ಅವರು ಅಫ್ಘಾನಿಸ್ತಾನಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Source: newsfirstlive.com Source link