2ನೇ ಟೆಸ್ಟ್​​​: ಇಂಗ್ಲೆಂಡ್​ ಆಟಗಾರರು ಮಾಡಿದ್ರಾ ಬಾಲ್​ ಟ್ಯಾಂಪರಿಂಗ್​.? ವಿಡಿಯೋ ವೈರಲ್

2ನೇ ಟೆಸ್ಟ್​​​: ಇಂಗ್ಲೆಂಡ್​ ಆಟಗಾರರು ಮಾಡಿದ್ರಾ ಬಾಲ್​ ಟ್ಯಾಂಪರಿಂಗ್​.? ವಿಡಿಯೋ ವೈರಲ್

ಇಂಡೋ-ಇಂಗ್ಲೆಂಡ್​ ನಡುವಿನ 2ನೇ ಟೆಸ್ಟ್​ ಪಂದ್ಯದಲ್ಲಿ ಬಾಲ್​ ಟ್ಯಾಂಪರಿಂಗ್​ ಗುಮ್ಮ ಮತ್ತೆ ಸದ್ದು ಮಾಡ್ತಿದೆ. ನಿನ್ನೆಯ ದಿನದಾಟ ಭಾರತದ ಬ್ಯಾಟಿಂಗ್​ ವೇಳೆ ಇಂಗ್ಲೆಂಡ್​ ಆಟಗಾರರಾದ ಮಾರ್ಕ್​ ವುಡ್​​, ರೋರಿ ಬರ್ನ್ಸ್​ ನಡೆದುಕೊಂಡ ರೀತಿ ಈ ಒಂದು ಚರ್ಚೆಯನ್ನ ಹುಟ್ಟಿಹಾಕಿದೆ.

ಈ ಇಬ್ಬರು ಆಟಗಾರರು ಭಾರತ 63 ​ಗಳಿಸಿದ್ದ ವೇಳೆ ಬಾಲ್​ ಅನ್ನ ಶೂಗಳಲ್ಲಿ ಹೊಸಕಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಇದೇ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗಿದೆ. ಜೊತೆಗೆ ಇದು ಉದ್ದೇಶ ಪೂರ್ವಕವಾಗಿ ಬಾಲ್​ ಟ್ಯಾಂಪರಿಂಗ್ ನಡೆಸಿದ್ದಾ ಎಂಬ ಪ್ರಶ್ನೆಯ ಹುಟ್ಟಿಗೆ ಕಾರಣವಾಗಿದೆ. ಹಲ ಮಾಜಿ ಕ್ರಿಕೆಟಿಗರು, ಕ್ರಿಕೆಟ್​​ ಎಕ್ಸ್​ಪರ್ಟ್​ಗಳು ಕೂಡ ಈ ಬಗ್ಗೆ ಚರ್ಚೆ ಎತ್ತಿದ್ದಾರೆ.

ಈ ಬಗ್ಗೆ ಚರ್ಚೆ ಏಳುತ್ತಿದ್ದಂತೆ ಬಾಲ್ ಸ್ಟುವರ್ಟ್​ ಬ್ರಾಡ್​ ಟ್ವೀಟ್​ ಮಾಡಿ, ಇದು ಉದ್ದೇಶಪೂರ್ವಕ ಘಟನೆ ನಡೆದಿಲ್ಲ. ಆಕಸ್ಮಿಕ ಘಟನೆ ಎಂದಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್​ ಮಾಡಿರುವ ಭಾರತದ ಮಾಜಿ ಕ್ರಿಕೆಟಿಗ ಸೆಹ್ವಾಗ್​, ಇದು ಇಂಗ್ಲೆಂಡ್​​ ಆಟಗಾರರ ಬಾಲ್ ಟ್ಯಾಂಪರಿಂಗಾ ಅಥವಾ ಕೋವಿಡ್​​ ಮುನ್ನೆಚ್ಚರಿಕಾ ಕ್ರಮನಾ..? ಎಂದು ಪ್ರಶ್ನಿಸಿದ್ದಾರೆ.

Source: newsfirstlive.com Source link