ಮ.ಪ್ರದೇಶ ಬಿಜೆಪಿ ಕಚೇರಿಯಲ್ಲಿ ತ್ರಿವರ್ಣ ಧ್ವಜಕ್ಕಿಂತಲೂ ಎತ್ತರದಲ್ಲಿ ಹಾರಿದ ಪಕ್ಷದ ಬಾವುಟ

ಮ.ಪ್ರದೇಶ ಬಿಜೆಪಿ ಕಚೇರಿಯಲ್ಲಿ ತ್ರಿವರ್ಣ ಧ್ವಜಕ್ಕಿಂತಲೂ ಎತ್ತರದಲ್ಲಿ ಹಾರಿದ ಪಕ್ಷದ ಬಾವುಟ

ಇಂದೋರ್: ಮಧ್ಯಪ್ರದೇಶದ ಅಗರ್​​ನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ತ್ರಿವರ್ಣಧ್ವಜ ಹಾರಿಸಲಾಗಿದೆ. ಆದರೆ ತ್ರಿವರ್ಣ ಧ್ವಜಕ್ಕಿಂತಲೂ ಎತ್ತರದಲ್ಲಿ ಪಕ್ಷದ ಬಾವುಟವನ್ನು ಹಾರಿಸಲಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದ್ದು ಚರ್ಚೆಗೆ ಈಡಾಗಿದೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್​ಡಿಎಂ ರಾಜೇಂದ್ರ ಸಿಂಗ್ ರಘುವಂಶಿ ನಾನು ಅಂಥ ಯಾವುದೇ ವಿಡಿಯೋ ನೋಡಿಲ್ಲ ಎಂದಿದ್ದಾರೆ. ಇನ್ನು ಕಚೇರಿ ಬಳಿಗೆ ಸ್ವಾತಂತ್ರ್ಯ ದಿನದ ಬಗ್ಗೆ ವರದಿ ಮಾಡಲು ಬಂದಿದ್ದ ಪತ್ರಕರ್ತರೂ ಸಹ ಈ ಘಟನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಹರಿಹಾಯ್ದ ಅಗರ್​ನ ಬಿಜೆಪಿ ಅಧ್ಯಕ್ಷ ಗೋವಿಂದ್ ಸಿಂಗ್ ಬರ್ಕೇಧಿ.. ನೀವು ಪ್ಲಾಂಟೆಡ್ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ.. ಇದನ್ನು ನೀವು ಪ್ರೈಬೇಟ್ ಜಾಗದಲ್ಲಿ ಕೇಳಬೇಕು.. ನನಗೂ ಕಣ್ಣಿದೆ ಎಂದು ಕೂಗಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ನೂತನ ಜಿಲ್ಲೆ ವಿಜಯನಗರದಲ್ಲಿ 150 ಅಡಿ ಎತ್ತರಕೆ ಹಾರಿದ ತಿರಂಗಾ

ಇನ್ನು ಕಟ್ಟಡದಲ್ಲಿ ತ್ರಿವರ್ಣ ಧ್ವಜ ಕಟ್ಟಿದ ಸಿಬ್ಬಂದಿ ಪ್ರತಿಕ್ರಿಯೆ ನೀಡಿದ್ದು.. ನಾವೇನೂ ತಪ್ಪು ಮಾಡಿಲ್ಲ.. ಪಾರ್ಟಿಯ ಬಾವುಟವನ್ನು ಮೊದಲೇ ಕಟ್ಟಲಾಗಿತ್ತು. ಇಂದು ತ್ರಿವರ್ಣ ಧ್ವಜ ಹಾರಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಘಟನೆಯ ಬಗ್ಗೆ ಕಾಂಗ್ರೆಸ್ ಶಾಸಕ ವಿಪಿನ್ ವಾಂಖೆಡೆ ಪ್ರತಿಕ್ರಿಯೆ ನೀಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರ ವಿರುದ್ಧ ದೂರು ದಾಖಲಿಸುತ್ತೇವೆ ಎಂದಿದ್ದಾರೆ.

Source: newsfirstlive.com Source link