ಯಡಿಯೂರಪ್ಪ ವಿವಾಸದೆದುರು ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಯುವಕರು

ಯಡಿಯೂರಪ್ಪ ವಿವಾಸದೆದುರು ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಯುವಕರು

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.​​ ಯಡಿಯೂರಪ್ಪ ನೆಲೆಸಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿ ಬಳಿ ಕಾರ್​​ವೊಂದು ಅಪಘಾತಕ್ಕೀಡಾಗಿದೆ. ಡ್ರೈವರ್ ಕುಡಿದ ಮತ್ತಿನಲ್ಲಿದ್ದ ಕಾರಣ ಈ ಅಪಘಾತ ನಡೆದಿದೆ ಎನ್ನಲಾಗಿದೆ.

ಇಬ್ಬರು ಯುವಕರು ಕುಡಿದು ಅಡ್ಡಾದಿಡ್ಡಿ ಕಾರು ಚಾಲಾಯಿಸಿ ಪಲ್ಸರ್​​​ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ಇನ್ನು ಪಲ್ಸರ್​​ ಬೈಕಿನಲ್ಲಿದ್ದ ಮಹಿಳೆ ಕಾಲು ಮುರಿದಿದೆ ಎಂದು ಹೇಳಲಾಗುತ್ತಿದೆ.

ಪಲ್ಸರ್​​ ಬೈಕಿನಲ್ಲಿ ಗಂಡ, ಹೆಂಡತಿ ಮತ್ತು ಮಗು ಹೋಗುತ್ತಿದ್ದರು. ಈ ವೇಳೆ ಕಾರು ಬೈಕಿಗೆ ಡಿಕ್ಕಿ ಹೊಡೆದು ಹೆಂಡತಿ ಕಾಲು ಮುರಿದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕುಡಿದ ಮತ್ತಲ್ಲಿ ಐಷಾರಾಮಿ ಕಾರು ಅಪಘಾತ; ರಸ್ತೆಯಲ್ಲೇ ವಾಹನ ಬಿಟ್ಟು ಹೋದ ಯುವಕ-ಯುವತಿ

ಸದ್ಯ ಮಹಿಳೆಯನ್ನು ಚಿಕಿತ್ಸೆಗಾಗಿ ಮಲ್ಲಿಗೆ ಆಸ್ಪತ್ರೆಗೆ ಸೇರಿಸಲಾಗಿದೆ. ಅಪ್ಪ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Source: newsfirstlive.com Source link