ಲಾರ್ಡ್ಸ್ ಟೆಸ್ಟ್​ನಲ್ಲಿ ಆಂಗ್ಲರ ವಿರುದ್ಧ ಚೆಂಡು ವಿರೂಪ ಆರೋಪ

ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು ಶೂನಿಂದ ಚೆಂಡನ್ನು ತುಳಿದು ವಿರೂಪಗೊಳಿದ್ದಾರೆ ಎಂಬ ಕುರಿತು ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ.

ಇಂಗ್ಲೆಂಡ್‍ನ ಇಬ್ಬರು ಆಟಗಾರರು ಶೂನಲ್ಲಿ ಚೆಂಡನ್ನು ತುಳಿದಿರುವ ಫೋಟೋಗಳನ್ನು ಹಾಕಿ ಆಂಗ್ಲ ಆಟಗಾರರು ಕಳ್ಳಾಟದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಜಿ ಆಟಗಾರರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಆಸೀಸ್ ಆಟಗಾರ – ಸ್ಮಿತ್ ನಾಯಕತ್ವ ತಲೆದಂಡ? 

ವಿರೇಂದ್ರ ಸೆಹ್ವಾಗ್ ಇದು ಇಂಗ್ಲೆಂಡ್ ಆಟಗಾರರು ನಡೆಸುತ್ತಿರುವ ಚೆಂಡು ವಿರೂಪವೇ ಅಥವಾ ಕೊರೊನಾ ಮುನ್ನಚ್ಚೆರಿಕಾ ಕ್ರಮವೇ ಎಂದು ತಮಾಷೆಯಾಗಿ ಪ್ರಶ್ನೆ ಮಾಡಿದರೆ. ಸ್ಟುವರ್ಟ್ ಬ್ರಾಡ್, ಈ ಘಟನೆಯ ಪೂರ್ಣ ವೀಡಿಯೋ ನೋಡದೆ ವಿಶ್ಲೇಷಿಸುವುದು ಸರಿಯಲ್ಲ. ಇದು ಆಕಸ್ಮಿಕವಾಗಿರಬಹುದು ಎಂದಿದ್ದಾರೆ.

ಈ ನಡುವೆ ಈ ದೃಶ್ಯಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಹಾಗಾಗಿ ಈ ಕುರಿತು ಮ್ಯಾಚ್ ರೆಫ್ರಿ ಸೂಕ್ಷವಾಗಿ ತನಿಖೆ ನಡೆಸುವ ಸಾಧ್ಯತೆ ಇದೆ.

Source: publictv.in Source link