ಅನ್​​ಲಾಕ್​​ ಬಳಿಕ ಅಲಭ್ಯ; ಟ್ವಿಟರ್​​ನಿಂದ ದೂರ ಉಳಿದ್ರಾ ರಾಹುಲ್​​ ಗಾಂಧಿ? ಯಾಕೆ ಮೌನ?

ಅನ್​​ಲಾಕ್​​ ಬಳಿಕ ಅಲಭ್ಯ; ಟ್ವಿಟರ್​​ನಿಂದ ದೂರ ಉಳಿದ್ರಾ ರಾಹುಲ್​​ ಗಾಂಧಿ? ಯಾಕೆ ಮೌನ?

ನವದೆಹಲಿ: ದೆಹಲಿಯಲ್ಲಿ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಬಾಲಕಿ ಕುಟುಂಬಸ್ಥರೊಂದಿಗೆ ತೆಗೆದುಕೊಂಡ ಚಿತ್ರವನ್ನು ಹಂಚಿಕೊಂಡಿದ್ದಾಗಿ ಕಾಂಗ್ರೆಸ್​ ವರಿಷ್ಠ ರಾಹುಲ್​​ ಗಾಂಧಿಯವರ ಖಾತೆಯನ್ನು ಟ್ವಿಟರ್​​​ ಲಾಕ್​​ ಮಾಡಿತ್ತು. ಈ ಬೆನ್ನಲ್ಲೇ ರಾಹುಲ್​​ ಗಾಂಧಿಯವರನ್ನು ಬೆಂಬಲಿಸಿ ಲಕ್ಷಾಂತರ ಕಾಂಗ್ರೆಸ್​ ಕಾರ್ಯಕರ್ತರು ಟ್ವಿಟರ್​​ ಕಂಪನಿ ವಿರುದ್ಧ ಅಭಿಯಾನ ನಡೆಸಿದ್ದರು. ನಂತರ ಟ್ವಿಟರ್​​​ ರಾಹುಲ್​​ ಗಾಂಧಿಯವರ ಖಾತೆಯನ್ನು ಅನ್​ಲಾಕ್​​ ಮಾಡಿತ್ತು.

ಟ್ವಿಟರ್​​​ ರಾಹುಲ್​​ ಗಾಂಧಿಯವರ ಖಾತೆಯನ್ನು ಅನ್​​ಲಾಕ್​​ ಮಾಡಿದ್ದೇ ತಡ ಕಾಂಗ್ರೆಸ್​, ”ಸತ್ಯಮೇವ ಜಯತೆ” ಎಂದು ಟ್ವೀಟ್​​ ಮಾಡಿತ್ತು. ಅಲ್ಲದೇ ರಾಹುಲ್‌ ಗಾಂಧಿಯವರ ವಿಚಾರದಲ್ಲಿ ಮಾತ್ರ ಮೈಕ್ರೊ ಬ್ಲಾಗಿಂಗ್ ಸೈಟ್​​​ ಎಂದೇ ಕರೆಯಲಾಗುವ ಟ್ವಿಟ್ಟರ್‌ ಪಕ್ಷಪಾತ ಮಾಡುತ್ತಿದೆ. ಈ ಮೂಲಕ ಭಾರತದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿತ್ತು.

ಇನ್ನು, ಟ್ವಿಟರ್​​ ಖಾತೆಯನ್ನು ಅನ್​​ಲಾಕ್​​ ಮಾಡಿದರೂ ರಾಹುಲ್​​ ಗಾಂಧಿಯವರು ಮಾತ್ರ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಇಂದು ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿದ್ದ ರಾಹುಲ್​​ ಗಾಂಧಿ, ಟ್ವಿಟರ್​ ಖಾತೆಯಿಂದ ದೂರ ಉಳಿದಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿ ಟ್ವಿಟರ್​​ ಖಾತೆಯಿಂದ ಟ್ವೀಟ್​​ ಮಾಡದೇ ಇರುವ ರಾಹುಲ್​​ ಗಾಂಧಿಯವರ ನಡೆ ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ.

 

View this post on Instagram

 

A post shared by Rahul Gandhi (@rahulgandhi)

ರಾಹುಲ್​​ ಗಾಂಧಿಯವರು ಈ ಬೆಳವಣಿಗೆ ನಂತರ ಟ್ವಿಟರ್​ ಅನ್ನು ಪ್ರಜ್ಞಾಪೂರ್ವಕವಾಗಿ ಅವಾಯ್ಡ್​ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಟ್ವಿಟರ್​​ ನಡೆಯಿಂದ ರಾಹುಲ್​​ ಬೇಸತ್ತು ಹೋಗಿದ್ದಾರೆ. ಅತ್ಯಚಾರಕ್ಕೊಳಗಾದ ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಿದ್ದ ರಾಹುಲ್​​​ ಮಾಹಿತಿ ಹಂಚಿಕೊಳ್ಳಲು ಟ್ವಿಟರ್​​ ಬಳಸಿದ್ದರು. ಆದರೆ, ಟ್ವಿಟರ್​​ ಸಂಸ್ಥೆ ನಡೆದುಕೊಂಡ ರೀತಿ ಸರಿಯಾಗಿರಲಿಲ್ಲ. ಹಾಗಾಗಿ ಟ್ವಿಟರ್​​ ಬಾಯ್​ಕಾಟ್​ ಮಾಡಲು ರಾಹುಲ್​​ ಇದರಿಂದ ದೂರ ಉಳಿದಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ.

Source: newsfirstlive.com Source link