ಸ್ಯಾಂಡಲ್​ವುಡ್ ಹಿರಿಯ ನಿರ್ಮಾಪಕ ಬಿ.ವಿಜಯ್​ಕುಮಾರ್ ನಿಧನ

ಸ್ಯಾಂಡಲ್​ವುಡ್ ಹಿರಿಯ ನಿರ್ಮಾಪಕ ಬಿ.ವಿಜಯ್​ಕುಮಾರ್ ನಿಧನ

ಬೆಂಗಳೂರು: ಕನ್ನಡ ಚಲನಚಿತ್ರ ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ ಫಿಲ್ಮ್ ಚೇಂಬರ್​​ನ ಮಾಜಿ ಅಧ್ಯಕ್ಷರಾಗಿದ್ದ ಬಿ.ವಿಜಯ್​​ಕುಮಾರ್ (63) ನಿಧನರಾಗಿದ್ದಾರೆ.

ಡಾ.ವಿಷ್ಣುವರ್ಧನ್​ ಅವರ ಲಯನ್​ ಜಗಪತಿ ರಾವ್, ಜಗದೇಕ ವೀರ ಮತ್ತು ಸಿಂಹಾದ್ರಿಯ ಸಿಂಹ ಸೇರಿದಂತೆ ಹಲವು ಚಿತ್ರಗಳ ನಿರ್ಮಾಪಕರಾಗಿದ್ದ ಬಿ.ವಿಜಯ್ ಕುಮಾರ್ ನಿನ್ನೆ ರಾತ್ರಿ 9.20 ರ ಸುಮಾರಿಗೆ ನಿಧನರಾಗಿದ್ದು, ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಜಯನಗರದಲ್ಲಿ ವಿಜಯ್​ ಕುಮಾರ್ ಅವರ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಜಯ್ ಕುಮಾರ್ ಅವರು ಕರ್ನಾಟಕ ರೇಷ್ಮೆ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಲ್ಲದೇ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಫಿಲ್ಮ್​​ ಫೆಡರೇಷನ್​ ಆಫ್​​​ ಇಂಡಿಯಾ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

Source: newsfirstlive.com Source link