ಅಣ್ಣನ ಮಗ ನಿರಂಜನ್​​ಗೆ ಎರಡು ಬಾರಿ ವಿಷ್ಣು ದಾದ ಆಶೀರ್ವಾದ ಸಿಕ್ಕಿದೆ; ಉಪೇಂದ್ರ ಹೀಗಂದಿದ್ಯಾಕೆ?

ಅಣ್ಣನ ಮಗ ನಿರಂಜನ್​​ಗೆ ಎರಡು ಬಾರಿ ವಿಷ್ಣು ದಾದ ಆಶೀರ್ವಾದ ಸಿಕ್ಕಿದೆ; ಉಪೇಂದ್ರ ಹೀಗಂದಿದ್ಯಾಕೆ?

ಡಾ. ವಿಷ್ಣುವರ್ಧನ್ ಫ್ಯಾಮಿಲಿಗೂ ಹಾಗೂ ಉಪೇಂದ್ರ ಫ್ಯಾಮಿಲಿಗೂ ಹಿಂದಿನಿಂದಲೂ ಉತ್ತಮ ಸ್ನೇಹ ಬಾಂಧವ್ಯವಿದೆ.. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅವರಿಗೆ ಡಾ. ವಿಷ್ಣುವರ್ಧನ್ ಅವರ ಆಶೀರ್ವಾದ ಎರಡ್ ಎರಡು ಬಾರಿಗೆ ಸಿಕ್ಕಿದೆ.

ಹೌದು, ಸಾಹಸ ಸಿಂಹ ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಅವರ ಆಶೀರ್ವಾದದಿಂದ ಅನೇಕ ಸ್ಟಾರ್ ಸೆಲೆಬ್ರಿಟಿಗಳು ಕನ್ನಡ ಸಿನಿಮಾ ರಂಗದಲ್ಲಿ ಭದ್ರ ಭೂನಾದಿಯನ್ನ ಹಾಕಿಕೊಂಡಿದ್ದಾರೆ.. ವಿಷ್ಣುವರ್ಧನ್ ಅನ್ನೋ ಹೆಸರಿಗೆ ಕನ್ನಡ ನಾಡು ಮತ್ತು ಕನ್ನಡ ಚಿತ್ರರಂಗದಲ್ಲಿ ಅಷ್ಟು ಪವರ್ ಇದೆ.. ಈಗ ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅವರಿಗೂ ವಿಷ್ಣುವರ್ಧನ್ ಅವರ ಆಶೀರ್ವಾದ ಎರಡ್ ಎರಡು ಬಾರಿಗೆ ಸಿಕ್ಕಿದೆಯಂತೆ.

blank

ಸೆಕೆಂಡ್ ಆಫ್ ಸಿನಿಮಾದ ಮೂಲಕ ಕನ್ನಡ ಬೆಳ್ಳಿತೆರೆಗೆ ಪರಿಚಯವಾದವರು ನಿರಂಜನ್ ಸುಧೀಂದ್ರ.. ಈಗ ಸೂಪರ್ ಸ್ಟಾರ್ ಸಿನಿಮಾದ ಮೂಲಕ ಸದ್ದು ಮಾಡಲು ಅಣಿಯಾಗುತ್ತಿದ್ದಾರೆ.. ಈಗ್ಯಾಪ್​ನಲ್ಲೆ ಸದ್ದು ಗದ್ದಲ್ಲ ಮಾಡದೇ ನಮ್ಮ ಹುಡುಗರು ಸಿನಿಮಾದಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ.. ಶೂಟಿಂಗ್ ಮುಗಿಸಿರುವ ಸಂಭ್ರಮದಲ್ಲಿ ನಮ್ಮ ಹುಡುಗರು ಚಿತ್ರತಂಡ ಉಪೇಂದ್ರ ಅವರ ಕೈಯಲ್ಲಿ ಟೀಸರ್ ಲಾಂಚ್ ಮಾಡಿಸಿದೆ..

ನೋಡಿದ್ರಲ್ಲ ವಿಷ್ಣುದಾದಾನ ಆಶೀರ್ವಾದ ನಿರಂಜನ್ ಅವರಿಗೆ ಹೇಗಿ ಸಿನಿಮಾದಲ್ಲಿ ಸಿಕ್ಕಿದೆ ಅಂತ.. ಇನ್ನು ನಿಜ ಜೀವನದಲ್ಲಿ ವಿಷ್ಣುದಾದಾನ ಅಶೀರ್ವಾದ ನಿರಂಜನ್​ ಅವರಿಗೆ ಹೇಗೆ ಸಿಕ್ತು ಅನ್ನೋದನ್ನ ಉಪೇಂದ್ರ ಅವರೇ ಹೇಳಿದ್ದಾರೆ.

blank

ವಿಷ್ಣು ದಾದಾ ಅವರ ಕಟೌಟ್ ನಿಂದ ನಿರಂಜನ್ ಮೇಲೆ ಹೂವಿನ ಹಾರ ಬೀಳುವಂತೆ ಇಂಟ್ರೊಡಕ್ಷನ್ ಸೀನ್ ಮಾಡಲಾಗಿದೆ. ಅದು ಬಹಳ ಇಷ್ಟ ಆಯ್ತು, ನಿರಂಜನ್ ಮೊದಲು ಬಣ್ಣ ಹಚ್ಚಿದ್ದೇ ವಿಷ್ಣುವರ್ಧನ್ ಸಿನಿಮಾದಲ್ಲಿ. ನಿರಂಜನ್ ಬಹಳ ಅದೃಷ್ಟವಂತ. ವಿಷ್ಣುವರ್ಧನ್ ‘ಬಳ್ಳಾರಿ ನಾಗ’ ಚಿತ್ರದಲ್ಲಿ ಅವರ ಬಾಲ್ಯದ ಪಾತ್ರವನ್ನು ನಿರಂಜನ್ ಮಾಡಿದ್ದ. ಈಗ ಟೀಸರ್ ನಲ್ಲಿ ಈ ರೀತಿ ತೋರಿಸಿರುವುದು, ಅವರೇ ಇವನಿಗೆ ಆಶೀರ್ವಾದ ಮಾಡಿದಂತೆ ಇದೆ’ ಎಂದು ಉಪೇಂದ್ರ ಹೊಗಳಿದರು.

ನಮ್ಮ ಹುಡುಗರು ಸಿನಿಮಾದ ಟೀಸರ್ ಲಾಂಚ್ ಆಗಿದೆ.. ನಿರಂಜನ್ ಸುಂಧೀಂದ್ರ ನಾಯಕನಾಗಿರೋ ಈ ಚಿತ್ರದಲ್ಲಿ ರಾದ್ಯಾ ನಾಯಕಿಯಾಗಿ ಕಂಗೊಳಿಸಿದ್ದಾರೆ.. ಹೆಚ್​.ಬಿ.ಅಶ್ರಫ್ ನಿರ್ಮಾಣದಲ್ಲಿ ಹೆಚ್​.ಬಿ.ಸಿದ್ಧು ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ.. ಅಭಿಮಾನ್ ರಾಯ್ ಸಂಗೀತ ಸಂಯೋಜನೆ ಚಿತ್ರಕ್ಕಿಂದು ಶೀಘ್ರದಲ್ಲೇ ಹಾಡುಗಳು ಕನ್ನಡ ಕೇಳುಗರನ್ನ ತಲುಪಲಿವೆ..

blank

ಒಟ್ಟಿನಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹತ್ತರಿವಾಗಲು ಉಪ್ಪಿ ಅವರ ಅಣ್ಣನ ಮಗ ನಿರಂಜನ್ ಸಿನಿ ಕಾರ್ಯದಲ್ಲಿ ಮಗ್ನರಾಗಿದ್ದಾರೆ.. ಆಲ್ ಬೆಸ್ಟ್ ನಿರಂಜನ್ ಸುಂಧೀಂದ್ರ.

Source: newsfirstlive.com Source link