ರಾತ್ರೋರಾತ್ರಿ ಬೆಂಗಳೂರಿನಲ್ಲಿ ನಿಗೂಢ ಸ್ಫೋಟ -ಗಂಭೀರವಾಗಿ ಗೊಂಡ ವೃದ್ಧ ದಂಪತಿ

ರಾತ್ರೋರಾತ್ರಿ ಬೆಂಗಳೂರಿನಲ್ಲಿ ನಿಗೂಢ ಸ್ಫೋಟ -ಗಂಭೀರವಾಗಿ ಗೊಂಡ ವೃದ್ಧ ದಂಪತಿ

ಬೆಂಗಳೂರು: ರಾತ್ರೋರಾತ್ರಿ ಸಂಭವಿಸಿದ ನಿಗೂಢ ಸ್ಪೋಟಕ್ಕೆ ಬೆಂಗಳೂರಿಗರು ಬೆಚ್ಚಿಬಿದ್ದಿರುವ ಘಟನೆ ವಿಜಯನಗರದ ಹಂಪಿನಗರ ನಿವಾಸದಲ್ಲಿ ನಡೆದಿದೆ. ಎರಡು ಅಂತಸ್ತಿನ ಮೊದಲನೇ ಮಹಡಿಯಲ್ಲಿ ಸ್ಪೋಟ ಸಂಭವಿಸಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ.

blank

ಮನೆಯಲ್ಲಿದ್ದ ವೃದ್ಧ ದಂಪತಿಗಳಾದ ಸೂರ್ಯನಾರಾಯಣಶೆಟ್ಟಿ ಹಾಗೂ ಪತ್ನಿ ಪುಷ್ಪಾವತಮ್ಮಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಇಬ್ಬರನ್ನ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಸ್ಫೋಟದ ತೀವ್ರತೆಗೆ ಅಕ್ಕಪಕ್ಕದಲ್ಲಿದ್ದ ಸುಮಾರು ಐದಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ. ಅಲ್ಲದೆ ಸ್ಫೋಟದ ಸದ್ದು ಸುಮಾರು ಅರ್ಧ ಕಿಲೋ ಮೀಟರ್​ವರೆಗೂ ಕೇಳಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

blank

ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಸ್ಫೋಟ ಹೇಗೆ ಸಂಭವಿಸಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಸದ್ಯಕ್ಕೆ ಈ ಸ್ಫೋಟ ಯಾವುದರಿಂದ ಸಂಭವಿಸಿತು ಅನ್ನೋದೆ ನಿಗೂಢವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಫೋಟದ ದೃಶ್ಯಗಳೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಫೋಟ ಸಂಭವಿಸುತ್ತಿದಂತೆ ಇಡೀ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಟ್​ ಆಗಿದೆ.

blank

Source: newsfirstlive.com Source link