‘ಮೋದಿ 7 ವರ್ಷದಿಂದ ಒಂದೇ ಭಾಷಣ ಮಾಡ್ತಿದ್ದಾರೆ’ -ಮಲ್ಲಿಕಾರ್ಜುನ ಖರ್ಗೆ

‘ಮೋದಿ 7 ವರ್ಷದಿಂದ ಒಂದೇ ಭಾಷಣ ಮಾಡ್ತಿದ್ದಾರೆ’ -ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಮಾಡಿದ ಭಾಷಣದ ಬಗ್ಗೆ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.

ಕಳೆದ 7 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಒಂದೇ ರೀತಿ ಭಾಷಣ ಮಾಡುತ್ತಿದ್ದಾರೆ. ಈ ಭಾಷಣಗಳಲ್ಲಿ ಹೇಳುವ ಭರವಸೆಗಳು, ಯೋಜನೆಗಳು ಕೇಳೋದಕ್ಕೆ ಮಾತ್ರ ಚಂದ. ಆದ್ರೆ ಇವುಗಳ ಚಾಲನೆಗೆ ಕೇಂದ್ರ ಸರ್ಕಾರ ಇನ್ನು ಯಾವ ತಯಾರಿಯೂ ಮಾಡಿಲ್ಲ ಅಂತ ಕಿಡಿಕಾರಿದ್ದಾರೆ. ಜೊತೆಗೆ ಸತತವಾಗಿ 7 ವರ್ಷಗಳಿಂದ ಮೋದಿ ಒಂದೇ ರೀತಿಯ ಭಾಷಣ ಮಾಡ್ತಾರೆ, ಇದುವರೆಗೂ ಒಂದು ಯೋಜನೆಯೂ ತಳಮಟ್ಟದಲ್ಲಿ ಜಾರಿಯಾಗಿಲ್ಲ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ತೀವ್ರ ಪ್ರತಿಭಟನೆ ನಡೆಯುತ್ತಿದ್ದರು ಕಾಯ್ದೆ ವಾಪಸ್​ ಪಡೆದಿಲ್ಲ ಎಂದು ಟೀಕೆ ಮಾಡಿದ್ದಾರೆ.

ಕೆಂಪು ಕೋಟೆಯ ಮೇಲೆ ನಿಂತು ಕಾಂಗ್ರೆಸ್​ ಬಗ್ಗೆ ಟೀಕೆ ಮಾಡಿದ್ರೆ ದೇಶ ಅಭಿವೃದ್ಧಿ ಆಗೋದಿಲ್ಲ. ದೇಶಕ್ಕಾಗಿ ಕಾಂಗ್ರೆಸ್​ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದೆ. ರೈತರಿಗೆ ನೀರಾವರಿ ಒದಗಿಸುವ ವ್ಯವಸ್ಥೆಯನ್ನು ಮಾಡಿದೆ. ಕಳೆದ ಎರಡು ವರ್ಷಗಳ ಯೋಜನೆಯನ್ನೇ ಮತ್ತೊಮ್ಮೆ ಪ್ರಕಟಿಸುವ ಸಾಧನೆಯನ್ನಷ್ಟೇ ಮಾಡಿದ್ದಾರೆ ಎಂದಿದ್ದಾರೆ.

Source: newsfirstlive.com Source link