ವೈಷ್ಣವಿಗೆ ದೆವ್ವದ ಕಥೆ ಹೇಳಿದ ಅಕುಲ್ ಬಾಲಾಜಿ

ಬಿಗ್‍ಬಾಸ್ ಮಿನಿ ಸೀಸನ್ ಆರಂಭವಾಗಿದ್ದು, ದೊಡ್ಮನೆಯಲ್ಲಿ 16 ಮಂದಿ ಸ್ಪರ್ಧಿಗಳು ತುಂಬಿ ತುಳುಕುತ್ತಿದ್ದಾರೆ. ಈ ಮಧ್ಯೆ ಅಕುಲ್ ಬಾಲಾಜಿ ವೈಷ್ಣವಿಗೆ ದೆವ್ವದ ವಿಚಾರವೊಂದನ್ನು ಹೇಳಿ ಹೆದರಿಸಿದ್ದಾರೆ.

ಬಿಗ್‍ಬಾಸ್ ಮಿನಿ ಸೀಸನ್ ಮೊದಲನೇ ದಿನ ವೈಷ್ಣವಿ ಹಾಗೂ ಅಕುಲ್ ಬಾಲಾಜಿ ಬೆಡ್ ರೂಂನಲ್ಲಿ ಕುಳಿತುಕೊಂಡಿರುತ್ತಾರೆ. ಈ ವೇಳೆ ಅಕುಲ್ ಬಾಲಾಜಿ ಒಮ್ಮೆ ವಾಶ್ ರೂಂ ಬಳಿ ರಾತ್ರಿ 12 ಗಂಟೆಗೆ ಹೋಗಿ ನೋಡು ನಿನಗೆ ಏನಿದೆ ಅಂತ ಗೊತ್ತಾಗುತ್ತದೆ ಎಂದಿದ್ದಾರೆ. ಆಗ ವೈಷ್ಣವಿ ಕುತೂಹಲದಿಂದ ನೀವೇ ಹೇಳಿ ನಾನು ಹೆದರಿಕೊಳ್ಳುವುದಿಲ್ಲ ಅಂತ ಕೇಳುತ್ತಾರೆ. ಇದಕ್ಕೆ ಅಕುಲ್ ನಿಮ್ಮ ಪೋಷಕರು ಬೇರೆ ಇಲ್ಲಿ ಇಲ್ಲ, ನಿನಗೆ ಮೊದಲೇ ದೆವ್ವ ಅಂದರೆ ಭಯ, ಆಮೇಲೆ ನಿನಗೆ ಅದರತ್ತ ಗಮನ ಸೆಳೆಯುತ್ತದೆ. ಹಾಗಾಗಿ ನಾನು ಹೇಳುವುದಿಲ್ಲ ಎನ್ನುತ್ತಾರೆ.

ನಿನಗೆ ಯಾವತ್ತಾದರೂ ನೀನು ಮಲಗಿಕೊಂಡಾಗ ಬೆಡ್ ಶೀಟ್ ಎಳೆದ ಅನುಭವ ಆಗಿದ್ಯಾ? ಅಂದಾಗ ವೈಷ್ಣವಿ ಇಲ್ಲ ಅಂದಿದ್ದಾರೆ. ಅಲ್ಲದೇ ನಾನು ನಿನ್ನೆ ಹೋಟೆಲ್‍ನಲ್ಲಿ ಇದ್ದಾಗ ಬಾಗಿಲು ಅಲ್ಲಡುತ್ತಿದ್ದ ಶಬ್ಧ ಆಗುತ್ತಿತ್ತು. ಆಗ ನಾನು ಯಾಕೆ ಹೀಗೆ ಸದ್ದು ಮಾಡುತ್ತಿದ್ಯಾ, ಇಲ್ಲೆ ಇದ್ಯಾ, ಸರಿ ನಾನು ಮಲಗುವುದಕ್ಕೆ ಬಿಡು ಅಂತ ಆತ್ಮ ಜೊತೆ ಮಾತನಾಡಿರುವುದಾಗಿ ಹೇಳಿದ್ದಾರೆ.

blank

ನಂತರ ಇದನ್ನು ಕೇಳಿ ನಿಮ್ಮ ಮೈ ಮೇಲೆ ಒಂದು ರೀತಿ ರೋಮಾಂಚನ ಆಗಿದೆ ಎಂದರೆ ಆತ್ಮ ಬಂದು ನಿಮ್ಮನ್ನು ಟಚ್ ಮಾಡಿ ಹೋಗಿದೆ ಎಂದರ್ಥ. ಆತ್ಮಗಳಿಗೆ ನನ್ನ ಜೊತೆ ಯಾರಾದರೂ ಮಾತನಾಡಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಅವು ನಮ್ಮ ಬಳಿ ಮಾತನಾಡಲು ಬರುತ್ತದೆ ಎಂದು ಹೇಳುತ್ತಾರೆ. ಈ ಮಧ್ಯೆ ಜಗನ್ ಹಾಸ್ಯಮಯವಾಗಿ ನನ್ನ ಫೋನ್ ನಂಬರ್ ಕೊಡಿ ನಾನು ಮಾತನಾಡುತ್ತೇನೆ ಅಂತ ಹಾಸ್ಯ ಮಾಡುತ್ತಾರೆ. ಇದನ್ನೂ ಓದಿ:ಅರ್ಜುನ್ ಸರ್ಜಾ ಹುಟ್ಟುಹಬ್ಬಕ್ಕೆ ಜೂ.ಚಿರು ವಿಶ್

Source: publictv.in Source link