ನಕಾರಾತ್ಮಕ ಆಲೋಚನೆಗಳನ್ನ ನಿಯಂತ್ರಿಸೋದು ಹೇಗೆ? -ವಿಡಿಯೋ ಹಂಚಿಕೊಂಡ ಶಿಲ್ಪಾ ಶೆಟ್ಟಿ

ನಕಾರಾತ್ಮಕ ಆಲೋಚನೆಗಳನ್ನ ನಿಯಂತ್ರಿಸೋದು ಹೇಗೆ? -ವಿಡಿಯೋ ಹಂಚಿಕೊಂಡ ಶಿಲ್ಪಾ ಶೆಟ್ಟಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ತಮ್ಮ ಪತಿಯ ಬಂಧನದ ನಂತರ ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

‘ವೀ ಫಾರ್​ ಇಂಡಿಯಾ’ ಎಂಬ ನಿಧಿ ಸಂಗ್ರಹ ಸಂಸ್ಥೆಗಾಗಿ ವಿಡಿಯೋ ಮಾಡಿರುವ ಶಿಲ್ಪಾ ಶೆಟ್ಟಿ, ಪ್ರಾಣಾಯಾಮದ ಮಹತ್ವವನ್ನು ಜನರಿಗೆ ತಿಳಿಸಿದ್ದಾರೆ. ಇದಷ್ಟೇ ಅಲ್ಲದೇ ನಕಾರಾತ್ಮಕ ಯೋಚನೆಗಳಿಂದ ಹೊರಬರುವ ಬಗ್ಗೆಯೂ ಜನರಿಗೆ ಹಲವು ಟಿಪ್ಸ್​ ನೀಡಿದ್ದಾರೆ.

ಇದೇ ವೇಳೆ ಲಸಿಕೆ ಪಡೆಯದವರು ಆದಷ್ಟು ಬೇಗ ಲಸಿಕೆ ಪಡೆಯಬೇಕು ಹಾಗೂ ಕಡ್ಡಾಯವಾಗಿ ಕೊರೊನಾ ನಿಯಮಗಳನ್ನ ಪಾಲಿಸಬೇಕು ಅಂತ ನಟಿ ಶಿಲ್ಪಾ ಶೆಟ್ಟಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಅಂದಹಾಗೆ ಕಳೆದ ತಿಂಗಳು ಶಿಲ್ಪಾ ಶೆಟ್ಟಿ ಅವರ ಗಂಡ ಉದ್ಯಮಿ ರಾಜ್​ ಕುಂದ್ರಾ ಅಶ್ಲೀಲ ಸಿನಿಮಾಗಳ ನಿರ್ಮಾಣದ ಆರೋಪದ ಮೇಲೆ ಬಂಧಿಯಾಗಿದ್ದಾರೆ.

Source: newsfirstlive.com Source link