IPL 2ನೇ ಚರಣಕ್ಕೆ ಚೆನ್ನೈ ತಯಾರಿ -ಒಂದೂವರೆ ತಿಂಗಳ ಮುನ್ನವೇ ಯುಎಇನಲ್ಲಿ ಬೀಡುಬಿಟ್ಟಿದ್ದೇಕೆ ಸಿಎಸ್​ಕೆ?

IPL 2ನೇ ಚರಣಕ್ಕೆ ಚೆನ್ನೈ ತಯಾರಿ -ಒಂದೂವರೆ ತಿಂಗಳ ಮುನ್ನವೇ ಯುಎಇನಲ್ಲಿ ಬೀಡುಬಿಟ್ಟಿದ್ದೇಕೆ ಸಿಎಸ್​ಕೆ?

ಐಪಿಎಲ್ ಸೆಕೆಂಡ್ ಫೇಸ್​​ಗೆ ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಇದಕ್ಕಾಗಿ ಎಲ್ಲಾ ತಂಡಗಳು ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿವೆ. ಕೊರೊನಾ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್, ಸೆಪ್ಟೆಂಬರ್ 19ರಿಂದ ಮರು ಆರಂಭವಾಗಲಿದೆ. ಇದಕ್ಕಾಗಿ ಐಪಿಎಲ್ ಫ್ರಾಂಚೈಸಿಗಳು ಭರ್ಜರಿ ಸಿದ್ಧತೆ ನಡೆಸಿಕೊಳ್ತಿವೆ. ಅದ್ರಲ್ಲೂ ಸಿಎಸ್‌ಕೆ ಫ್ರಾಂಚೈಸಿ, ಒಂದೂವರೆ ತಿಂಗಳು ಮುನ್ನವೇ ಯುಎಇಗೆ ತೆರಳಿದೆ.

blank

ಎಂ.ಎಸ್.ಧೋನಿ, ಸುರೇಶ್ ರೈನಾ, ದೀಪಕ್ ಚಹರ್, ರುತುರಾಜ್ ಗಾಯಕ್ವಾಡ್, ಕರಣ್ ಶರ್ಮಾ ಸೇರಿದಂತೆ, ತಂಡದ ಪ್ರಮುಖ ಆಟಗಾರರು ದುಬೈ ತಲುಪಿದ್ದಾರೆ. ಸದ್ಯ ಆಟಗಾರರೆಲ್ಲಾ 7 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಲಿದ್ದಾರೆ. ಬಳಿಕ ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಎಲ್ಲಾ ತಂಡಗಳಿಗಿಂತ ಮುಂಚೆಯೇ ಯುಎಇಗೆ ತಲುಪಿರುವ ಚೆನ್ನೈಗೆ, ಇದು ಭಾರೀ ಲಾಭವೆಂದೇ ಕ್ರಿಕೆಟ್ ಪಂಡಿತರು ವಿಶ್ಲೇಷಿಸ್ತಿದ್ದಾರೆ.

ಚೆನ್ನೈಗೆ ಹೇಗೆ ಲಾಭ..?

  • ಯುಎಇ ವಾತಾವರಣಕ್ಕೆ ಆಟಗಾರರು ಹೊಂದಿಕೊಳ್ಳುತ್ತಾರೆ
  • ಪಿಚ್​ ಕಂಡೀಷನ್ಸ್, ವರ್ತನೆ​ ಬಗ್ಗೆ ಆಟಗಾರರು ಅರಿಯುತ್ತಾರೆ
  • ಬ್ಯಾಟಿಂಗ್, ಬೌಲಿಂಗ್ ಹೇಗೆ ಮಾಡಬೇಕೆಂದು ತಿಳಿಯುತ್ತೆ
  • ಹಿಂದಿನ ಸೀಸನ್​ನಲ್ಲಿ ಎಸಗಿದ ತಪ್ಪನ್ನ ಸರಿಪಡಿಸಿಕೊಳ್ಳಬಹುದು
  • ಪಿಚ್​ನಲ್ಲಿ ಆಡಿದ ಅನುಭವದಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತೆ
  • ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯವಾಗುತ್ತೆ

ಹೌದು, ಚೆನ್ನೈ ಆಟಗಾರರು ಬೇಗ ಯುಎಇಗೆ ತೆರಳಿರೋದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯವಾಗುವುದರ ಜೊತೆಗೆ ಪಿಚ್ ಕಂಡೀಷನ್ಸ್​ ಬಗ್ಗೆ ಅರಿಯಲು ನೆರವಾಗುತ್ತೆ. ಇದರಿಂದಾಗಿ ಬ್ಯಾಟಿಂಗ್, ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತೆ. ಹಿಂದಿನ ಸೀಸನ್​ನಲ್ಲಿ ಎಸಗಿದ್ದ ತಪ್ಪನ್ನ ಸರಿಪಡಿಸಿಕೊಳ್ಳಲು ಇದು, ಸಹಾಯಕಾರಿಯಾಗಲಿದೆ. ಅಭ್ಯಾಸ ಶಿಬಿರದಲ್ಲಿ ಆಡಿದ ಅನುಭವ ಆಟಗಾರರ ಆತ್ಮವಿಶ್ವಾಸ ವೃದ್ಧಿಸುವುದರ ಜೊತೆಗೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಗುತ್ತೆ.

ಒಟ್ಟಿನಲ್ಲಿ ಸಿಎಸ್​ಕೆ ಮ್ಯಾನೇಜ್​ಮೆಂಟ್ ನಡೆಯನ್ನ ನೋಡುತ್ತಿದ್ರೆ, ಈ ಬಾರಿ ಕಪ್ ಗೆಲ್ಲಲೇಬೇಕು ಅಂತ ಪಣತೊಟ್ಟಂತಿದೆ. ಹೀಗಾಗಿ ಟೂರ್ನಿ ಆರಂಭಕ್ಕೆ ಒಂದುವರೆ ತಿಂಗಳಿಗೂ ಮುನ್ನವೇ, ತಂಡ ಯು.ಎ.ಇಗೆ ತೆರೆಳಿರೋದು ಬಿಗ್ ಅಡ್ವಾಂಟೇಜ್​ ಅಂತಾನೇ ಹೇಳಲಾಗ್ತಿದೆ.

Source: newsfirstlive.com Source link