10ರ DRS​​ನಲ್ಲಿ 7 ರಿವ್ಯೂ ಫೇಲ್​ -DRS ವಿಷಯದಲ್ಲಿ ಕೊಹ್ಲಿಯದ್ದು ಬೇಕಾಬಿಟ್ಟಿ ವರ್ತನೆಯೇ?

10ರ DRS​​ನಲ್ಲಿ 7 ರಿವ್ಯೂ ಫೇಲ್​ -DRS ವಿಷಯದಲ್ಲಿ ಕೊಹ್ಲಿಯದ್ದು ಬೇಕಾಬಿಟ್ಟಿ ವರ್ತನೆಯೇ?

ನಿಮಗೆ 2019ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್​​ನಲ್ಲಿ​ ಆಸ್ಟ್ರೇಲಿಯಾ ಒಂದು ಕಳಪೆ DRS​​ ನಿರ್ಧಾರದಿಂದ ತೆತ್ತ ಬೆಲೆ ನೆನಪಿರಬಹುದು. ಅಂದು ಆಸಿಸ್​ ಮಾಡಿದ ಒಂದು ತಪ್ಪು, ಇಂಗ್ಲೆಂಡ್​ ಎದುರು ಶರಣಾಗುವಂತೆ ಮಾಡಿತು. ಈ ಹಳೆ ಕಥೆ ಈಗ್ಯಾಕೆ ಅಂತೀರಾ ಈ ಸ್ಟೋರಿ ಓದಿ..

ಡಿಶಿಷನ್​ ರಿವ್ಯೂ ಸಿಸ್ಟಮ್​..! ಅಂಪೈರ್​ ತೀರ್ಪನ್ನ ಮರು ಪರಿಶೀಲನೆ ಮಾಡೋಕೆ ಇರೋ ಒಂದು ಅವಕಾಶ. ಇದೊಂದು ಪ್ರಮುಖ ಅಸ್ತ್ರ ಕೂಡ ಹೌದು. ಪಂದ್ಯದ ಗತಿಯನ್ನೇ ಬದಲಿಸುವ ಶಕ್ತಿ ಇರೋ ಈ ಅಸ್ತ್ರವನ್ನ ಹೆಚ್ಚು ಜವಾಬ್ದಾರಿ ಮತ್ತು ಬುದ್ದಿವಂತಿಕೆಯಿಂದ ಉಪಯೋಗಿಸಿಕೊಳ್ಳೋದು ನಾಯಕನ ಆದ್ಯ ಕರ್ತವ್ಯ. ಆದರೆ ಈ ವಿಚಾರದಲ್ಲಿ ವಿರಾಟ್​ ಕೊಹ್ಲಿಯದ್ದು ತದ್ವಿರುದ್ಧ ನಡೆಯಾಗಿದೆ. ಅದಕ್ಕೆ ಇಂಡೋ-ಇಂಗ್ಲೆಂಡ್​ ನಡುವಿನ ಟೆಸ್ಟ್​​ ಸರಣಿಯೇ ಉತ್ತಮ ಉದಾಹರಣೆ.

blank

ಇಂಡೋ-ಇಂಗ್ಲೆಂಡ್​ ನಡುವಿನ 2ನೇ ಟೆಸ್ಟ್​​ನಲ್ಲೂ ವಿರಾಟ್​, ಬೇಡದ DRSಗಳನ್ನ ಪಡೆದು ಇದ್ದ ಅವಕಾಶಗಳನ್ನ ಹಾಳು ಮಾಡಿಕೊಂಡಿದ್ದಾರೆ. 2ನೇ ದಿನದಾಟದಲ್ಲಿ ಕೀಪರ್​​ ರಿಷಭ್​ ಪಂತ್​ ಬೇಡ ಬೇಡ ಎಂದರೂ ಬೌಲರ್​ ಸಿರಾಜ್ ಮೇಲಿನ​​​ ಎಮೋಷನಲ್ ಕನೆಕ್ಷನ್​ ಕೊಹ್ಲಿಯನ್ನ DRS ತೆಗೆದುಕೊಳ್ಳುವಂತೆ ಮಾಡ್ತು. ಅದ್ರ ಫಲಿತಾಂಶ ಡಿಆರ್​ಎಸ್​ ಫೇಲ್​ ಅನ್ನೋದೆ ಆಗಿತ್ತು. 2ನೇ ಟೆಸ್ಟ್​ನಲ್ಲಿ ಮಾತ್ರವಲ್ಲ.. ಮೊದಲ ಟೆಸ್ಟ್​ನಲ್ಲೂ ಕೊಹ್ಲಿ ಇದೇ ತಪ್ಪನ್ನ ಮಾಡಿದ್ರು.

ಪ್ರಸ್ತುತ ಸರಣಿಯ 2 ಪಂದ್ಯಗಳಿಂದ 10 ಬಾರಿ DRS ಮೊರೆ ಹೋಗಿರುವ ಕೊಹ್ಲಿ 7 ಬಾರಿ ಫೇಲ್​ ಆಗಿದ್ದಾರೆ. ಕೊಹ್ಲಿಯ ಈ ಕೆಟ್ಟ ನಿರ್ಧಾರಗಳು ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಕ್ರಿಕೆಟಿಗ ವಿವಿಎಸ್​​ ಲಕ್ಷ್ಮಣ್​, ಕೊಹ್ಲಿ ಎಮೋಷನಲ್​ ರಿವಿವ್ಯೂನಿಂದ ಹೊರಬರಲೇಬೇಕು ಎಂದು ನೇರ ಮಾತುಗಳಲ್ಲೇ ಛಾಟಿ ಬೀಸಿದ್ದಾರೆ. ಇದಕ್ಕೆ ಸದ್ಯ ನಡೀತಾ ಇರೋ ಸರಣಿ ಮಾತ್ರವಲ್ಲ..! ಈ ಹಿಂದಿನ ದಾಖಲೆಗಳು ಕಾರಣವಾಗಿವೆ.

blank

DRS ವಿಷಯದಲ್ಲಿ ಕೊಹ್ಲಿ ಮೋಸ್ಟ್​ ಅನ್​​ಲಕ್ಕಿಯಸ್ಟ್​ ಪರ್ಸನ್ ಅಂದ್ರೆ ತಪ್ಪಾಗಲ್ಲ​ ಈವರೆಗೆ 169 ಬಾರಿ ಡಿಆರ್​​ಎಸ್​​ ಮೊರೆ ಹೋಗಿರುವ ಕೊಹ್ಲಿ, ಬರೋಬ್ಬರಿ 118 ಬಾರಿ ಫೇಲ್ಯೂರ್​ ಆಗಿದ್ದಾರೆ. 30ರಲ್ಲಿ ಮಾತ್ರ ಸಕ್ಸಸ್​ ಕಂಡಿದ್ರೆ, ಉಳಿದ 21 ಅಂಪೈರ್​​​​ಕಾಲ್​ಗೆ ಒಳಪಟ್ಟಿವೆ. ಈ ಅಂಕಿ-ಅಂಶಗಳೇ ಕೊಹ್ಲಿಯ ಕಳಪೆ ಡಿಆರ್​ಎಸ್​ ಕಾಲ್​ಗೆ ಸಾಕ್ಷಿಯಾಗಿ ನಿಂತಿವೆ. ಈ ಬಗ್ಗೆ ಹಲವು ಬಾರಿ ಎಚ್ಚರಿಸಿದ್ರೂ, ಕೊಹ್ಲಿ ಮಾತ್ರ ತಪ್ಪನ್ನ ಪದೇ ಪದೇ ಮಾಡ್ತಿದ್ದಾರೆ. ಮುಂದಾದ್ರೂ ವಿರಾಟ್​ ಸರಿಯಾದ ನಿರ್ಧಾರ ತೆಗೆದುಕೊಳ್ಳಬಹುದಾ..? ಕಾದು ನೋಡಬೇಕಿದೆ.

Source: newsfirstlive.com Source link