ಧೋನಿಯನ್ನ ನೋಡಲು ಈ ಅಭಿಮಾನಿ ಮಾಡಿದ್ದೇನು ಗೊತ್ತಾ..?

ಧೋನಿಯನ್ನ ನೋಡಲು ಈ ಅಭಿಮಾನಿ ಮಾಡಿದ್ದೇನು ಗೊತ್ತಾ..?

ಎಂ.ಎಸ್.ಧೋನಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​​ಬೈ ಹೇಳಿ ಒಂದು ವರ್ಷ ಕಳೆದರೂ, ಧೋನಿಯ ಕ್ರೇಜ್ ಮಾತ್ರ ಒಂಚೂರು ಕಡಿಮೆಯಾಗಿಲ್ಲ. ವಿಶ್ವದಾದ್ಯಂತ ಧೋನಿ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಧೋನಿ ಹೆಸರಲ್ಲಿ ಮನೆ, ಧೋನಿ ಹೆಸರಲ್ಲಿ ಸೇವಾ ಕಾರ್ಯಗಳನ್ನ ಮಾಡಿರೋದು ನಾವು ಈ ಹಿಂದೆ ನೋಡಿದ್ದೇವೆ. ಆದ್ರೆ ಈಗ ಧೋನಿ ಅಭಿಮಾನಿಯೋರ್ವ, ತಮ್ಮ ನೆಚ್ಚಿನ ಹೀರೋನಾ ಕಣ್ತುಂಬಿಸಿಕೊಳ್ಳಲು ಬರೋಬ್ಬರಿ 1400 ಕಿ.ಲೋ ಮೀಟರ್ ನಡೆದುಕೊಂಡು ಬಂದಿದ್ದಾನೆ.

ಹರಿಯಾಣದ ಅಜಯ್‌ ಗಿಲ್‌, ಸತತ 16 ದಿನಗಳ ಕಾಲ ಕಾಲ್ನಡಿಗೆಯಲ್ಲೇ ನಡೆದು ಬಂದು, ರಾಂಚಿ ತಲುಪಿದ್ದಾರೆ. ಜುಲೈ 29ರಂದು ತಮ್ಮ ಕಾಲ್ನಡಿಗೆಯ ಪಯಣ ಆರಂಭಿಸಿದ ಅಜಯ್ ಗಿಲ್, ನಿನ್ನೆ ರಾಂಚಿಗೆ ತಲುಪಿದ್ದಾರೆ. ಆದ್ರೆ ಮಹೇಂದ್ರ ಸಿಂಗ್ ಧೋನಿ, ಐಪಿಎಲ್​ಗಾಗಿ ಯುಎಇಗೆ ಹಾರಿರುವ ಕಾರಣ, ಭೇಟಿಯಾಗಲು ಸಾಧ್ಯವಾಗಿಲ್ಲ. ಧೋನಿ ದುಬೈನಲ್ಲಿರುವ ವಿಚಾರ ತಿಳಿದರು ಭೇಟಿ ಬಳಿಕವೇ ಮನೆಗೆ ಹಿಂತಿರುಗುವುದಾಗಿ, ಅಭಿಮಾನಿ ಪಟ್ಟು ಹಿಡಿದಿದ್ದಾನೆ. ಕೊನೆಗೆ ಸ್ಥಳೀಯರು ಅಭಿಮಾನಿಯನ್ನ ಮನವೊಲಿಸಿ ದಿಲ್ಲಿಗೆ ಮರಳಲು ವಿಮಾನಯಾನದ ಟಿಕೆಟ್‌ ಕೊಡಿಸಿ, ವಾಪಸ್ ಕಳುಹಿಸಿದ್ದಾರೆ. ಇದರೊಂದಿಗೆ ಅಭಿಮಾನಿಯ ಕಾಲ್ನಡಿಗೆಯ ಪಯಣ ಸುಖಕರ ಅಂತ್ಯ ಕಂಡಿದೆ.

 

 

Source: newsfirstlive.com Source link