ಎಡಗೈಯೇ ಅಪಘಾತಕ್ಕೆ ಕಾರಣ ಫಸ್ಟ್ ಲುಕ್ ಲಾಂಚ್ -ವಿಶೇಷ ಪಾತ್ರದಲ್ಲಿ ನಟ ದಿಗಂತ್ ಅಭಿನಯ

ಎಡಗೈಯೇ ಅಪಘಾತಕ್ಕೆ ಕಾರಣ ಫಸ್ಟ್ ಲುಕ್ ಲಾಂಚ್ -ವಿಶೇಷ ಪಾತ್ರದಲ್ಲಿ ನಟ ದಿಗಂತ್ ಅಭಿನಯ

ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎನ್ನುತ್ತಿದ್ದ ದೂತ್ ಪೇಡ ದಿಗಂತ್ ಈಗ ಎಡಗೈಯೇ ಅಪಘಾತಕ್ಕೆ ಕಾರಣ ಎನ್ನುತ್ತಿದ್ದಾರೆ. ದಿಗ್ಗಿ ಹಿಂಗನ್ನೋಕ್ಕೆ ಹೊಸ ಸಿನಿಮಾ. ಹೌದು ಈ ಚಿತ್ರದ ಹೆಸರೇ ಎಡಗೈಯೇ ಅಪಘಾತಕ್ಕೆ ಕಾರಣ ಅಂತ..

ವಿಶ್ವ ಎಡಚರ ದಿನದ ಅಂಗವಾಗಿ ಟೀಸರ್ ಬಿಟ್ಟು ಸದ್ದು ಮಾಡಿದೆ ಚಿತ್ರತಂಡ. ಈ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾವನ್ನ ಸಮರ್ಥ್ ಕಡಕೋಳ್​​ ಅನ್ನೋ ಹೊಸ ಪ್ರತಿಭೆ ನಿರ್ದೇಶನ ಮಾಡ್ತಿದ್ದಾರೆ. ಅಂಬಿನಿಂಗ್ ವಯಸಾಯ್ತೋ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ಈ ಚಿತ್ರದ ಕ್ರಿಯೆಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡ್ತಿದ್ದಾರೆ. ನವೆಂಬರ್ ತಿಂಗಳಿನಿಂದ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಶೂಟಿಂಗ್ ಶುರುವಾಗಲಿದೆ.

Source: newsfirstlive.com Source link