ಬೆಂಗಳೂರಿನ ಹಂಪಿನಗರ ಮನೆಯಲ್ಲಿ ನಿಗೂಢ ಸ್ಫೋಟ

ಬೆಂಗಳೂರು: ವಿಜಯನಗರದ ಹಂಪಿನನಗರ ಮನೆಯಲ್ಲಿ ನಿಗೂಢ ಸ್ಫೋಟವೊಂದು ಸಂಭವಿಸಿದೆ.

ಎರಡಂತಸ್ತಿನ ಕಟ್ಟಡದ ಮೊದಲನೇ ಮಹಡಿ ಮನೆಯಲ್ಲಿ ಬ್ಲಾಸ್ಟ್ ಸಂಭವಿಸಿದ್ದು, ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮನೆಯಲ್ಲಿದ್ದ ಸೂರ್ಯನಾರಾಯಣ ಶೆಟ್ಟಿ (74), ಪುಷ್ಪಾವಮ್ಮ (70) ಗಾಯಗೊಂಡಿದ್ದಾರೆ. ಗಾಯಾಳು ಪುಷ್ಪಾವತಮ್ಮಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ ಸೂರ್ಯನಾರಾಯಣ ಶೆಟ್ಟಿ ವಿಜಯನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಧ್ಯರಾತ್ರಿ 12:45 ಸುಮಾರಿಗೆ ಸ್ಫೋಟ ಸಂಭವಿಸಿದೆ. ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ನಿಂದ  ಸ್ಫೋಟ ಸಂಭವಿಸರಬಹುದು ಎಂಬ ಶಂಕೆ ಮೂಡಿತ್ತು. ಆದರೆ ಗ್ಯಾಸ್ ಸಿಲಿಂಡರ್ ನಿಂದ ಸ್ಫೋಟ ಸಂಭವಿಸಿಲ್ಲ. ಸ್ಫೋಟಕ್ಕೆ ನಿಜವಾದ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಮುನಿಸು ಶಮನವಾದರೂ ಜಮೀರ್ ಆಹ್ವಾನ ಒಪ್ಪದ ಸಿದ್ದರಾಮಯ್ಯ

ವಾರದ ಹಿಂದೆ ಹೊಸ ಫ್ರಿಡ್ಜ್ ಅನ್ನು ಮನೆಗೆ ತರಲಾಗಿತ್ತು. ಮನೆಯ ಮುಖ್ಯ ದ್ವಾರದ ಬಳಿ ನಿಲ್ಲಿಸಲಾಗಿದ್ದ ಫ್ರಿಡ್ಜ್ ಸಂಪೂರ್ಣ ಬ್ಲಾಸ್ಟ್ ಆಗಿದೆ. ಸ್ಫೋಟದ ರಭಸಕ್ಕೆ ಮನೆಯ ಬಾಗಿಲು ಛಿದ್ರಗೊಂಡಿದೆ. ಬಾಗಿಲು ಹಾರಿ ಹೋಗಿ ಬೀಳುವಾಗ ಮುಂದೆ ಇದ್ದ ತಂತಿಗೆ ತಗುಲಿದೆ. ಈ ವೇಳೆ ವಿದ್ಯುತ್ ತಂತಿಯಲ್ಲಿ ಸ್ಪಾರ್ಕ್ ಆಗಿ ತಕ್ಷಣ ಹಂಪಿ ನಗರ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಕತ್ತಲೆ ಆವರಿಸಿತ್ತು.

Source: publictv.in Source link