ನಿಗೂಢ ಸ್ಫೋಟಕ್ಕೆ ಕಾರಣವಾಯ್ತ ಹೊಸ ಫ್ರಿಡ್ಜ್​​​..?

ನಿಗೂಢ ಸ್ಫೋಟಕ್ಕೆ ಕಾರಣವಾಯ್ತ ಹೊಸ ಫ್ರಿಡ್ಜ್​​​..?

ಬೆಂಗಳೂರು: ವಿಜಯನಗರದ ಹಂಪಿನಗರ ನಿವಾಸದ ಮೊದಲನೇ ಮಹಡಿಯಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದ್ದು, ಮನೆಯಲ್ಲಿದ್ದ ವೃದ್ಧ ದಂಪತಿಯನ್ನು ರಕ್ಷಿಸಲಾಗಿದೆ. ಆದರೆ ಸ್ಫೋಟ ಹೇಗೆ ಸಂಭವಿಸಿದೆ ಅಂತ ಮಾತ್ರ ಇದುವರೆಗೆ ಪತ್ತೆಯಾಗಿಲ್ಲ. ಈ ಕುರಿತು ನ್ಯೂಸ್​​ಫಸ್ಟ್​ನೊಂದಿಗೆ ಮಾತನಾಡಿದ ದಂಪತಿಯ ಪುತ್ರ ದಿನೇಶ್​, ಹೊಸ ಫ್ರಿಡ್ಜ್​ ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

blank

ಸ್ಫೋಟದ ಬಗ್ಗೆ ಮಾಹಿತಿ ಪಡೆದ ವಿಜಯನಗರ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಸಿಲಿಂಡರ್ ಸ್ಫೋಟವಾದಿಂದ ದುರ್ಘಟನೆ ಆಯ್ತಾ ಅಂತಾ ನೋಡಿದರೆ ಮನೆಯಲ್ಲಿದ್ದ 2 ಸಿಲಿಂಡರ್ ಸೇಫ್ ಆಗಿದೆ. ಇತ್ತೀಚೆಗೆ ಖರೀದಿಸಿದ್ದ ಎಲೆಕ್ಟ್ರಿಕ್ ಬೈಕ್ ಪರೀಶಿಲನೆ ನಡೆಸಿದರೇ ಅದರ ಬ್ಯಾಟರಿ ಕೂಡ ಸುರಕ್ಷಿತವಾಗಿದೆ. ಸ್ಫೋಟ ಯಾವುದರಿಂದ ಸಂಭವಿಸಿತು ಅನ್ನೋದೆ ನಿಗೂಢವಾಗಿದೆ.

blank

ಘಟನೆಯ ಸಂಬಂಧ ಮಾಹಿತಿ ನೀಡಿರುವ ದಿನೇಶ್​, ಮನೆಯಲ್ಲಿ ತಂದೆ ಮತ್ತು ತಾಯಿ ವಾಸವಾಗಿದ್ದರು. ಅವರಿಗೆ ಸ್ಕಿನ್ ಇಂಜ್ಯೂರಿಸ್ ಆಗಿದೆ. ಸದ್ಯ ವಿಜಯನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸ್ಫೋಟ ಯಾವ ಕಾರಣಕ್ಕೆ ಆಯ್ತು ಅನ್ನೊದು ಗೊತ್ತಾಗ್ತಿಲ್ಲ. ಮನೆಯಲ್ಲಿದ್ದ ಎರಡು ಸಿಲಿಂಡರ್ ಆಗೆ ಇದೆ, ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸಹ ಉತ್ತಮವಾಗಿದೆ. ಯುಪಿಎಸ್ ಸಹ ಡ್ಯಾಮೇಜ್ ಆಗಿಲ್ಲ. ಮನೆಯಲ್ಲಿದ್ದ ಫ್ರಿಡ್ಜ್ ಮಾತ್ರ ಹಾರಿ ಬಿದಿದ್ದೆ. ಕಳೆದ ೧೫ ದಿನಗಳ ಹಿಂದೆ ಆನ್ ಲೈನ್ ನಲ್ಲಿ ಖರೀದಿಸಿದ್ದೇವು. ಅದರಿಂದಲೇ ನಡೆದಿರಬಹುದು ಅನ್ನೊ ಅನುಮಾನ ಇದೆ. ವಿಜಯನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತಿದ್ದೇನೆ. ತನಿಖೆ ಬಳಿಕ ವಿಚಾರ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

blank

Source: newsfirstlive.com Source link