‘ಅಫ್ಘಾನಿಸ್ತಾನಕ್ಕೆ ಪ್ರಾರ್ಥನೆ ಮತ್ತು ಶುಭಾಶಯ’ ಚರ್ಚೆಗೆ ಕಾರಣವಾಯ್ತು ಇರ್ಫಾನ್ ಪಠಾಣ್ ಟ್ವೀಟ್

‘ಅಫ್ಘಾನಿಸ್ತಾನಕ್ಕೆ ಪ್ರಾರ್ಥನೆ ಮತ್ತು ಶುಭಾಶಯ’ ಚರ್ಚೆಗೆ ಕಾರಣವಾಯ್ತು ಇರ್ಫಾನ್ ಪಠಾಣ್ ಟ್ವೀಟ್

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಪರಿಣಾಮ 2 ದಶಕಗಳ ಬಳಿಕ ಅಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನಿಗಳು ಪಾರುಪತ್ಯ ಸಾಧಿಸಿದ್ದಾರೆ. ಈ ನಡುವೆ ಟೀಂ ಇಂಡಿಯಾ ಮಾಜಿ ಆಟಗಾರ ಇರ್ಫಾನ್​ ಪಠಾಣ್ ಮಾಡಿರುವ ಟ್ವೀಟ್​​ ಭಾರೀ ಚರ್ಚೆಗೆ ಕಾರಣವಾಗಿದೆ.

ನಿನ್ನೆ ಅಫ್ಘಾನಿಸ್ತಾನದ ತಾಲಿಬಾನಿಗಳ ತೆಕ್ಕೆಗೆ ಬೀಳುತ್ತಿದ್ದಂತೆ ಅಧ್ಯಕ್ಷ ಆಶ್ರಫ್​ ಗನಿ ವಿದೇಶಕ್ಕೆ ಪಲಾಯನ ಮಾಡಿದ್ದರು. ಅಫ್ಘಾನಿಸ್ತಾನವನ್ನು ತೊರೆಯದಿದ್ರೆ ರಕ್ತಪಾತವಾಗುತ್ತಿತ್ತು. ಹೀಗಾಗಿ ನಾನು ಕಾಬೂಲ್​ ತೊರೆದೆ ಅಂತ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದರು. ಈ ನಡುವೆ ಟ್ವೀಟ್​ ಮಾಡಿರುವ ಇರ್ಫಾನ್​ ಪಠಾಣ್​, ಅಫ್ಘಾನಿಸ್ತಾನಕ್ಕೆ ಪ್ರಾರ್ಥನೆ ಮತ್ತು ಶುಭಾಶಯ ಎಂದು ಬರೆದುಕೊಂಡಿದ್ದಾರೆ.

ಇರ್ಫಾನ್​ ಪಠಾಣ್ ಅವರ ಟ್ವೀಟ್​ ನೆಟ್ಟಿಗರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದ್ದು, ಅಫ್ಘಾನಿಸ್ತಾನ ತಾಲಿಬಾನಿಗಳ ವಶಕ್ಕೆ ಹೋಗಿದ್ದಕ್ಕೆ ಪಠಾಣ್​ ಶುಭಾಶಯ ಕೋರಿದ್ದೀರಾ..? ಅಥವಾ ಪ್ರಜಾಪ್ರಭುತ್ವ ಸರ್ಕಾರ ಅಂತ್ಯವಾಗಿದಕ್ಕೆ ಶುಭಾಶಯ ಕೋರಿದ್ದೀರಾ? ಅಂತಾ ಹಲವರು ಪ್ರಶ್ನೆ ಮಾಡಿದ್ದಾರೆ. ನೆಟ್ಟಿಗರೊಬ್ಬರು ಪಠಾಣ್​ ಟ್ವೀಟ್​​ಗೆ ಪ್ರತಿಕ್ರಿಯೆ ನೀಡಿ, ನೀವು ಎರಡು ಹೆಣ್ಣು ಮಕ್ಕಳ ತಂದೆಯಾಗಿದ್ದೀರಿ.. ಕುಟುಂಬದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾದರೇ, ಮಹಿಳೆಯರು ಮನೆಯಿಂದ ಹೊರಗಡೆ ಹೋಗಲು ಅನುಮತಿ ಇಲ್ಲದಿದ್ದರೇ ಏನಾಗುತ್ತೆ ಎಂಬುವುದು ನಿಮಗೆ ಈಗ ಅರ್ಥವಾಗುವುದು ಸುಲಭ. ಮೊದಲು ಈ ಬಗ್ಗೆ ಯೋಚನೆ ಮಾಡಿ ಆ ಬಳಿಕ ಅವರನ್ನು ಸಮರ್ಥಿಸಿಕೊಳ್ಳಿ ಎಂದು ಹೇಳಿದ್ದಾರೆ.

ಟ್ವೀಟ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ಇದುವರೆಗೂ ತಮ್ಮ ಟ್ವೀಟ್​​ಗೆ ಇರ್ಫಾನ್​ ಪಠಾಣ್​ ಅವರು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

Source: newsfirstlive.com Source link