ಸರ್ಕಾರಿ ಜಾಗದಲ್ಲಿ ಫಸ್ಟ್​ಕ್ಲಾಸ್​ ಪಾರ್ಟಿ ಮಾಡಿದ ಪಂಚಾಯತಿ ನೌಕರರು

ಸರ್ಕಾರಿ ಜಾಗದಲ್ಲಿ ಫಸ್ಟ್​ಕ್ಲಾಸ್​ ಪಾರ್ಟಿ ಮಾಡಿದ ಪಂಚಾಯತಿ ನೌಕರರು

ವಿಜಯಪುರ: ನಿನ್ನೆ ದೇಶವೆಲ್ಲ 75 ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದ್ದರೆ ಜಿಲ್ಲೆಯ ಪಂಚಾಯತಿ ನೌಕರರು ಮಾತ್ರ ಗುಂಡು, ತುಂಡಿನ ಸಂಭ್ರಮದಲ್ಲಿದ್ದರು. ಹೌದು ಜಿಲ್ಲೆಯ ನಾಲತವಾಡ ಪಟ್ಟಣ ಪಂಚಾಯತಿ ನೌಕರರು ಸ್ವಾತಂತ್ರೋತ್ಸವದ ದಿನದಂದು ಸರ್ಕಾರಿ ಜಾಗೆಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.

blank

ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಂಚಾಯತಿ ನೌಕರರಿಗೆ ಪಟ್ಟಣಕ್ಕೆ ನೀರು ಪೂರೈಸುವ ಪಂಚಾಯತಿಯ ಪಂಪಹೌಸ್ ಇವರ ಪಾಲಿನ ಬಾರ್ ಆಗಿ ಮಾರ್ಪಾಡಾಗಿದೆ. ಸ್ವಾತಂತ್ರೋತ್ಸವದ ಸಂಭ್ರಮದ ಘಳಿಗೆಯಲ್ಲಿ ಇವರು ಸರ್ಕಾರಿ ಜಾಗೆ ಎಂದು ಲೆಕ್ಕಿಸದೆ, ಗುಂಡು-ತುಂಡಿನೊಂದಿಗೆ ಮೋಜು-ಮಸ್ತಿ ನಡೆಸಿದ್ದಾರೆ ಎನ್ನಲಾಗಿದೆ.

blank

ಶುದ್ಧ ಕುಡಿಯುವ ನೀರಿನ ಘಟಕದಲ್ಲೇ ನಾನ್ ವೆಜ್ ತಯಾರಿಸಿ, ಮದ್ಯ ತಂದು ಸೇವನೆ ಮಾಡಿದ ನೌಕರರ ಈ ಆಟಾಟೋಪಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿದ್ದು ನೌಕರರನ್ನು ಸಸ್ಪೆಂಡ್​ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲಿನ ಎಫ್​ಡಿಸಿ, ಎಸ್​ಡಿಸಿ, ಕಿರಿಯ ಆರೋಗ್ಯ ನಿರೀಕ್ಷಕ, ಐಟಿ ಸಿಬ್ಬಂದಿ, ಡಿ ದರ್ಜೆ ಸಿಬ್ಬಂದಿ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದ್ದು, ಪುಕ್ಸಟ್ಟೆ ಜಾಗದಲ್ಲಿ ಫಸ್ಟ್​ಕ್ಲಾಸ್​ ಪಾರ್ಟಿ ಮಾಡಿದ್ದಾರೆ..

Source: newsfirstlive.com Source link