ನಾಯಂಡಹಳ್ಳಿ – ಕೆಂಗೇರಿ ಮೆಟ್ರೋ ಸೇವೆಗೆ ಗ್ರೀನ್​​ ಸಿಗ್ನಲ್​​​; ಸೆಪ್ಟೆಂಬರ್​​ನಿಂದ ಆರಂಭ

ನಾಯಂಡಹಳ್ಳಿ – ಕೆಂಗೇರಿ ಮೆಟ್ರೋ ಸೇವೆಗೆ ಗ್ರೀನ್​​ ಸಿಗ್ನಲ್​​​; ಸೆಪ್ಟೆಂಬರ್​​ನಿಂದ ಆರಂಭ

ಬೆಂಗಳೂರು: ಬಹುನಿರೀಕ್ಷಿತ ನಾಯಂಡಹಳ್ಳಿ – ಕೆಂಗೇರಿ ಮೆಟ್ರೋ ಮಾರ್ಗ ಸಂಚಾರಕ್ಕೆ ಗ್ರೀನ್​​ ಸಿಗ್ನಲ್​​ ಸಿಕ್ಕಿದೆ. ಆಗಸ್ಟ್​​ ಕೊನೆಯ ವಾರ ಅಥವಾ ಸೆಪ್ಟೆಂಬರ್​​ ಮೊದಲ ವಾರದಲ್ಲಿ ಮುಖ್ಯಮಂತ್ರಿ ಬಸವರಾಜ್​​ ಬೊಮ್ಮಾಯಿ ಅವರು ಅಧಿಕೃತವಾಗಿ ನಾಯಂಡಹಳ್ಳಿ – ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.

ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್‌) ಮೆಟ್ರೋ ಮಾರ್ಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೆಟ್ರೋ ಮಾರ್ಗದಲ್ಲಿ ವಯಾಡಕ್ಟ್, ಸ್ಟೇಷನ್‌ ವರ್ಕ್ಸ್‌, ಪವರ್‌ ಸಪ್ಲೈ, ಸಿಸ್ಟಮ್‌ ವರ್ಕ್, ಎಂಟ್ರಿ-ಎಕ್ಸಿಟ್‌, ಸೇಫ್ಟಿ ಸೇರಿದಂತೆ ನಾನಾ ವಿಧದ ಪ್ರಯಾಣಿಕ ಸುರಕ್ಷತೆ ಕ್ರಮದ ಬಗ್ಗೆಯೂ ಆಯುಕ್ತರು ಪರಿಶೀಲಿಸಿದರು.

ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ಮಾರ್ಗ 7.53 ಕಿ.ಮೀ. ಉದ್ದವಿದೆ. ನಿತ್ಯ 75 ಸಾವಿರಕ್ಕೂ ಹೆಚ್ಚು ಜನ ಪ್ರಯಾಣಿಸಲಿದ್ದಾರೆ. ಬೈಯಪ್ಪನ ಹಳ್ಳಿಯಿಂದ ಕೆಂಗೇರಿಗೆ ಪ್ರಯಾಣಿಸಲು 56 ರೂ. ದರ ನಿಗದಿಪಡಿಸಲಾಗಿದೆ. ಮೆಟ್ರೋ ಜಾಲದ ಅತಿ ಉದ್ದದ ಮಾರ್ಗ, ಕೆಂಗೇರಿಯಿಂದ ಸಿಲ್ಕ್‌ ಇನ್ಸ್‌ಟಿಟ್ಯೂಟ್‌ವರೆಗೆ 60 ರೂ. ದರ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: IPL 2ನೇ ಚರಣಕ್ಕೆ ಚೆನ್ನೈ ತಯಾರಿ -ಒಂದೂವರೆ ತಿಂಗಳ ಮುನ್ನವೇ ಯುಎಇನಲ್ಲಿ ಬೀಡುಬಿಟ್ಟಿದ್ದೇಕೆ ಸಿಎಸ್​ಕೆ?

ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ನಿಲ್ದಾಣ ಮತ್ತು ಕೆಂಗೇರಿಯಲ್ಲಿ ಮೆಟ್ರೊ ನಿಲ್ದಾಣಗಳು ನಿರ್ಮಾಣವಾಗಿವೆ. ಸಿವಿಲ್‌ ಕಾಮಗಾರಿ‌ ಮುಗಿದಿದ್ದು, ನಿಲ್ದಾಣಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ‌. ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ ಹಾಗೂ ಕೆಂಗೇರಿ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

Source: newsfirstlive.com Source link