ಸಿಎಂ ಬೊಮ್ಮಾಯಿ ಖಾಸಗಿ ನಿವಾಸಕ್ಕೆ ಇನ್ಮುಂದೆ ಮೊಬೈಲ್ ನಿರ್ಬಂಧ

ಸಿಎಂ ಬೊಮ್ಮಾಯಿ ಖಾಸಗಿ ನಿವಾಸಕ್ಕೆ ಇನ್ಮುಂದೆ ಮೊಬೈಲ್ ನಿರ್ಬಂಧ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರ ಆರ್‌ಟಿನಗರದಲ್ಲಿರುವ ಖಾಸಗಿ ನಿವಾಸಕ್ಕೆ ಆಗಮಿಸುವವರಿಗೆ ಮೊಬೈಲ್ ನಿರ್ಬಂಧ ಮಾಡಿ ಸೂಚನೆ ನೀಡಲಾಗಿದೆ.

ಸಿಎಂ ನಿವಾಸಕ್ಕೆ ಆಗಮಿಸುವ ಕಾರ್ಯಕರ್ತರು ಹಾಗೂ ನಾಡಿನ ಜನರು ಮೊಬೈಲ್ ತೆಗೆದುಕೊಂಡು ಬಂದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಇದರಿಂದ ಬೇರೆ ಯಾವ ಕೆಲಸವನ್ನು ಮಾಡಲು ಬಿಡುವುದಿಲ್ಲ ಎಂಬ ಕಾರಣದಿಂದ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೊಬೈಲ್ ನಿರ್ಬಂಧಿಸಲಾಗಿದೆ ಎಂದು ಸಿಎಂ ನಿವಾಸ ಎದುರು ಸಿಬ್ಬಂದಿ ನಾಮಫಲಕ ಹಾಕಿದ್ದಾರೆ.

blank

ಸಿಎಂ ಖಾಸಗಿ ನಿವಾಸಕ್ಕೆ ಯಾವುದೇ ವ್ಯಕ್ತಿಗಳು ಬಂದರೂ ಮೊಬೈಲ್ ನಿರ್ಬಂಧ ಮಾಡಲಾಗಿದೆ. ಸಿಎಂರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕು, ಆ ಬಳಿಕ ಅಲ್ಲಿಂದ ಹೊರಡಬೇಕು ಎಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಮೊಬೈಲ್‌ನೊಂದಿಗೆ ಸಿಎಂ ನಿವಾಸ ಪ್ರವೇಶಿಸುವಂತಿಲ್ಲ ಎಂದು ಅಧಿಕೃತ ಸೂಚನೆಯನ್ನು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link