ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ -ನುಜ್ಜುಗುಜ್ಜಾದ ಕಾರು.. ಮೂವರಿಗೆ ಗಾಯ

ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ -ನುಜ್ಜುಗುಜ್ಜಾದ ಕಾರು.. ಮೂವರಿಗೆ ಗಾಯ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಇತ್ತೀಚಿಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿಯಲ್ಲಿ ಕಾಡಾನೆ ಏಕಾಏಕಿ ಗ್ರಾಮಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿತ್ತು, ನಂತರ ಮೂಡಿಗೆರೆ ಪಟ್ಟಣದಲ್ಲಿ ಒಂಟಿ ಸಲಗವೊಂದು ನಗರದೊಳಗೆ ಬೆಳ್ಳಂಬೆಳಗ್ಗೆ ಎಂಟ್ರಿ ಕೊಟ್ಟು ಹಾಯಾಗಿ ಮಲಗಿದ್ದ ಜನರಿಗೆ ಶಾಕ್​ ನೀಡಿ ಆತಂಕ ಸೃಷ್ಟಿಸಿತ್ತು.

ಈ ಘಟನೆಗಳು ಮಾಸುವ ಮುನ್ನವೇ ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆಯೊಂದು ದಾಳಿ ಮಾಡಿ ಕಾರು ಜಖಂಗೊಳಿಸಿರುವ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.

blank

ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಓಮ್ನಿ ಕಾರ್ ಜಖಂಗೊಂಡು, ಕಾರಿನಲ್ಲಿದ್ದ ಮೂವರಿಗೆ ಚಿಕ್ಕಪುಟ್ಟ ಗಾಯಗಳಾದ ಘಟನೆ, ಮೂಡಿಗೆರೆ ತಾಲೂಕಿನ ಭೈರೆಗುಡ್ಡು ಕ್ರಾಸ್ ಬಳಿ ನಡೆದಿದೆ.

ಇದನ್ನೂ ಓದಿ:  ಬೆಳ್ಳಂಬೆಳಗ್ಗೆ ಮತ್ತೆ ಕಾಡಾನೆ ಪ್ರತ್ಯಕ್ಷ: ಸಲಗದ ಹಾವಳಿಗೆ ಬೆಚ್ಚಿಬಿದ್ದ ಚಿಕ್ಕಮಗಳೂರು

ಸಾರಗೋಡು – ಕುಂದೂರು ರಸ್ತೆಯ ಮೂಲಕ ಹೊರನಾಡಿಗೆ ಹೋಗುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ಮಾಡಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಚಿಕ್ಕಮಗಳೂರು ಭಾಗದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಕಾಡನೆಗಳಿಂದ ಜನರು ಬೆಚ್ಚಿಬಿದ್ದಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟು ಮಾಡಿದೆ..

blank

Source: newsfirstlive.com Source link