ಶ್ವೇತಭವನದ ಮುಂದೆ ಅಫ್ಘಾನಿಸ್ತಾನ ಪ್ರಜೆಗಳ ಪ್ರತಿಭಟನೆ; ಸಾವಿರ ಲಾಡೆನ್​ ಹುಟ್ಟುತ್ತಾರೆಂಬ ಆತಂಕ

ಶ್ವೇತಭವನದ ಮುಂದೆ ಅಫ್ಘಾನಿಸ್ತಾನ ಪ್ರಜೆಗಳ ಪ್ರತಿಭಟನೆ; ಸಾವಿರ ಲಾಡೆನ್​ ಹುಟ್ಟುತ್ತಾರೆಂಬ ಆತಂಕ

ವಾಷಿಂಗ್ಟನ್: ತಾಲಿಬಾನಿಗಳಿಗೆ ಅಫ್ಘಾನಿಸ್ತಾನ ಸರ್ಕಾರ ಅಧಿಕೃತವಾಗಿ ಶರಣಾಗಿದೆ. ಅಫ್ಘಾನಿಸ್ತಾನದ ನೂತನ ಅಧ್ಯಕ್ಷರನ್ನಾಗಿ ತಾಲಿಬಾನ್​​ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದಾರ್​​ ಅವರನ್ನು ಘೋಷಿಸಲಾಗಿದೆ. ಸದ್ಯ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರವನ್ನು ತಾಲಿಬಾನ್​​ ಪಡೆಗಳು ಸಂಪೂರ್ಣ ವಶಪಡಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷರ ಅಧಿಕೃತ ಕಚೇರಿ ಶ್ವೇತಭವನದ ಮುಂದೆ ನೂರಾರು ಸಂಖ್ಯೆಯಲ್ಲಿ ಅಫ್ಘಾನಿಸ್ತಾನ ಪ್ರಜೆಗಳು ಜಮಾಯಿಸಿದ್ದಾರೆ. ತಾಲಿಬಾನ್​​​​ ಪಡೆಗಳು ನಮ್ಮ ದೇಶವನ್ನು ವಶಪಡಿಸಿಕೊಳ್ಳಲು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಕಾರಣ ಎಂದು ಅಫ್ಘಾನಿಸ್ತಾನ ಪ್ರಜೆಗಳು ಪ್ರತಿಭಟಿಸುತ್ತಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಅಫ್ಘಾನ್​​​ ಮಾಜಿ ಪತ್ರಕರ್ತ ಹಂದಾರ್ಫ್​​ ಗಫೂರಿ, ಅಮೆರಿಕಾ ನೇತೃತ್ವದ ಸೇನಾಪಡೆಗಳು ಮಟ್ಟ ಹಾಕಿದ್ದ ತಾಲಿಬಾನ್​​​ಗಳು 20 ವರ್ಷಗಳ ನಂತರ ದಿಢೀರ್​​ ಪತ್ತೆಯಾಗಿದ್ದಾರೆ. ನಮಗೆ ಶಾಂತಿ ಬೇಕು. ತಾಲಿಬಾನ್​​ ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಕ್ಕೆ ಪಡೆದರೆ ಮತ್ತೆ ಸಾವಿರಾರು ಮಂದಿ ಒಸಾಮಾ ಬಿನ್ ಲಾಡೆನ್ಸ್​, ಮುಲ್ಲಾ ಓಮರ್​​ಗಳು ಹುಟ್ಟಿಕೊಳ್ಳಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

blank

ಸುಮಾರು 20 ವರ್ಷಗಳ ನಂತರ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ತನ್ನ ದೇಶದ ಸೇನೆಯನ್ನು ವಾಪಸ್ಸು ಕರೆಸಿಕೊಂಡ ಮೇಲೆಯೇ ತಾಲಿಬಾನ್​​ ಅಫ್ಘಾನಿಸ್ತಾನ ವಶಕ್ಕೆ ಪಡೆದುಕೊಂಡಿದ್ದಾರೆ. ಇದಕ್ಕೆ ನೇರ ಹೊಣೆ ಜೋ ಬೈಡನ್. ಹಾಗಾಗಿ ಕೂಡಲೇ ಅಮೆರಿಕಾ ಅಧ್ಯಕ್ಷ ಸ್ಥಾನಕ್ಕೆ ಜೋ ಬೈಡೆನ್ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾನಿರತ ಅಫ್ಘಾನಿಸ್ತಾನ ಪ್ರಜೆಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅಶ್ರಫ್ ಗನಿ ರಾಜೀನಾಮೆ; ಅಫ್ಘಾನಿಸ್ತಾನ​​​ ಮುಂದಿನ ಅಧ್ಯಕ್ಷ ಮುಲ್ಲಾ ಬರಾದರ್

2020ರಲ್ಲಿ ದೋಹಾದಲ್ಲಿ ತಾಲಿಬಾನ್ ಜೊತೆಗೆ ನಡೆದ ಒಪ್ಪಂದದ ಪ್ರಕಾರ ಮೇ 2021ರೊಳಗೆ ಅಮೆರಿಕ ತನ್ನ ಎಲ್ಲಾ ಸೇನೆಯನ್ನು ವಾಪಸ್ಸು ಕರೆಸಿಕೊಳ್ಳುವುದಾಗಿ ಒಪ್ಪಂದ ಮಾಡಿಕೊಂಡಿತ್ತು. ​​ಉಗ್ರರಿಂದ ಮಿನಿಮಮ್​​ ಭದ್ರತಾ ಗ್ಯಾರಂಟಿ ಕೂಡಾ ವಿನಿಮಯ ಮಾಡಿಕೊಳ್ಳಲಾಗಿತ್ತು. ಜೋ ಬೈಡನ್ ಅಧಿಕಾರಕ್ಕೆ ಬಂದಾಗ ನೀಡಲಾಗಿದ್ದ ಗಡುವನ್ನು ಮುಂದಕ್ಕೆ ಹಾಕಿದ್ದರಲ್ಲದೇ, ಯಾವುದೇ ಷರತ್ತು ವಿಧಿಸಲಿಲ್ಲ. ಈ ನಡೆ ವಿರುದ್ಧವೂ ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link