110 ಎಕರೆಯಲ್ಲಿ ನಿರ್ಮಾಣವಾಗುತ್ತಿದೆ ಸಂಗೊಳ್ಳಿ ರಾಯಣ್ಣನ ಇತಿಹಾಸ ಸಾರುವ ರಾಕ್ ಗಾರ್ಡನ್

110 ಎಕರೆಯಲ್ಲಿ ನಿರ್ಮಾಣವಾಗುತ್ತಿದೆ ಸಂಗೊಳ್ಳಿ ರಾಯಣ್ಣನ ಇತಿಹಾಸ ಸಾರುವ ರಾಕ್ ಗಾರ್ಡನ್

ಸಂಗೊಳ್ಳಿ ರಾಯಣ್ಣ.. ಕ್ರಾಂತಿಯ ಕಹಳೆ ಮೊಳಗಿಸಿದ ಮಹಾವೀರ.. ಬ್ರಿಟಿಷರ ವಿರುದ್ಧ ಹೋರಾಡಿ ಜೀವತೆತ್ತ ಸ್ವಾತಂತ್ರ್ಯ ಹೋರಾಟಗಾರ.. ಅಂದಿನ ರಣರೋಚಕ ಹೋರಾಟದ ಕಥೆಗಳು ಇಲ್ಲಿ ಪುನರ್ಜನ್ಮವಾಗ್ತಿವೆ.. ರಾಯಣ್ಣನ ಗತವೈಭವ ಸಾರಲು ರಾಕ್ ಗಾರ್ಡನ್ ಸಿದ್ಧವಾಗ್ತಿದೆ..

ಬ್ರಿಟಿಷ್ ಸರ್ಕಾರದ ವಿರುದ್ಧ ತೊಡೆತಟ್ಟಿ ಹೋರಾಡಿ ಜೀವತೆತ್ತ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.. ಬ್ರಿಟಿಷರ ವಿರುದ್ಧ ಬಂಡೆದ್ದು ಹೋರಾಡಿದ ಕೆಚ್ಚೆದೆಯ ಕಿತ್ತೂರಿನ ಸೇನಾನಿ‌.. ಇಂತಹ ವೀರನ ಸಾಹಸಮಯ ಕಥೆಗಳನ್ನು ಮುಂದಿನ ಪೀಳಿಗೆ ಜೀವಂತವಾಗಿರಿದಲು ಸರ್ಕಾರ ಈಗ ಮುಂದಾಗಿದೆ..

ಹುಟ್ಟೂರಲ್ಲಿ ಸಂಗೊಳ್ಳಿ ರಾಯಣ್ಣನ ಇತಿಹಾಸ ಮರುಸೃಷ್ಠಿ
ಸಂಗೊಳ್ಳಿಯಲ್ಲಿ ತಲೆ ಎತ್ತಲಿದೆ ರಾಷ್ಟ್ರಭಕ್ತನ ಜೀವನ ಚರಿತ್ರೆ

blank

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಹೌದು ರಾಯಣ್ಣನ ತವರು.. ಈಗ ಗ್ರಾಮದ ಹೊರವಲಯದಲ್ಲಿ ರಾಷ್ಟ್ರ ಭಕ್ತನ ನೆನೆಯುವ ಮಹತ್ಕಾರ್ಯವೊಂದು ಆರಂಭವಾಗಿದೆ.. ಸೈನಿಕ ಶಾಲೆ ಹಾಗೂ‌ ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ ಸಾರುವ ರಾಕ್ ಗಾರ್ಡನ್ ನಿರ್ಮಾಣವಾಗ್ತಿದೆ.. ಸುಮಾರು 110 ಎಕರೆ ಪ್ರದೇಶದಲ್ಲಿ ಅಂದಿನ ಹೋರಾಟದ ಗಾಥೆಗಳನ್ನ ಸಾರುವ 1600ಕ್ಕೂ ಹೆಚ್ಚಿನ ಮೂರ್ತಿಗಳನ್ನು ವಿನ್ಯಾಸಗೊಳಿಸಲಾಗಿದೆ..

blank

ಅಷ್ಟಕ್ಕೂ ರಾಕ್ ಗಾರ್ಡನ್ ಏನೆಲ್ಲಾ ಇದೆ ಎಂಬುದನ್ನು ನೋಡುವುದಾದರೆ ಸಂಗೊಳ್ಳಿ ರಾಯಣ್ಣನ ಹೋರಾಟದ ಕುರಿತಾಗಿರುವ ಮೂರ್ತಿಗಳು, ಗರಡಿ ಮನೆ, ಕುಸ್ತಿ ಮೈದಾನ, ವೀರಭದ್ರ ದೇವಸ್ಥಾನ, ದರ್ಬಾರ್ ಹಾಲ್, ಬ್ರಿಟಿಷರೊಂದಿಗಿನ ಯುದ್ಧದ ಸನ್ನಿವೇಶಗಳ ಹೋರಾಟದ ಚಿತ್ರಣವನ್ನೇ ಮೂರ್ತಿಗಳ ರೂಪದಲ್ಲಿ ಕಣ್ತುಂಬಿಕೊಳ್ಳಬಹುದು.. ಸದ್ಯ ರಾಕ್​ ಗಾರ್ಡನ್ ಕಾಮಗಾರಿ ವೇಗ ಪಡೆದುಕೊಂಡಿದ್ದರೂ ಪೂರ್ಣಗೊಳ್ಳಲು ಸಾಕಷ್ಟು ತಿಂಗಳುಗಳು ಹಿಡಿಯಲಿವೆ.. ಇನ್ನು ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಸೈನಿಕ ಶಾಲೆ ತೆರೆದಿದ್ದು ನಮ್ಮ ಭಾಗ್ಯ ಎನ್ನುತ್ತಿದ್ದಾರೆ ಈ ಭಾಗದ ಜನ..

blank

ಹೀಗೆ ರಾಯಣ್ಣನ ಕಥೆಗಳು ನೂರಾರು.. ಆತನ ಜೀವನ ಚರಿತ್ರೆಯನ್ನು ಜೀವಂತವಾಗಿಡು ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಶ್ರಮ ಸರ್ಕಾರ ಹಾಕ್ತಿದೆ.. ಮುಂದಿನ ಕೆಲವೇ ದಿನಗಳಲ್ಲಿ ಸಾರ್ವಜನಿಕರ ದರ್ಶನಕ್ಕೆ ರಾಯಣ್ಣನ ರಾಕ್​​ ಗಾರ್ಡನ್​​ ಮುಕ್ತವಾಗಲಿದೆ.. ಇನ್ನು, ರಾಜ್ಯದಲ್ಲೇ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರಮಟ್ಟದ ಸೈನಿಕ ಶಾಲೆ ಶುರುವಾಗ್ತಿರೋದು ಕೂಡಾ ಇಲ್ಲಿನ ಜನ ಸಂತಸ ಇಮ್ಮಡಿಗೊಳಿಸಿದೆ..

ಶ್ರೀಕಾಂತ ಕುಬಕಡ್ಡಿ. ನ್ಯೂಸ್​​ಫಸ್ಟ್ ಬೆಳಗಾವಿ

Source: newsfirstlive.com Source link