ಜನಾಶೀರ್ವಾದ ಯಾತ್ರೆ: ಗದ್ದೆಗಿಳಿದು ಭತ್ತ ನಾಟಿ ಮಾಡಿದ ಸಚಿವೆ ಶೋಭಾ ಕರಂದ್ಲಾಜೆ

ಜನಾಶೀರ್ವಾದ ಯಾತ್ರೆ: ಗದ್ದೆಗಿಳಿದು ಭತ್ತ ನಾಟಿ ಮಾಡಿದ ಸಚಿವೆ ಶೋಭಾ ಕರಂದ್ಲಾಜೆ

ಮಂಡ್ಯ: ಇಂದಿನಿಂದ ಕೇಂದ್ರದ ನೂತನ ಸಚಿವರಿಂದ ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆ ಆರಂಭಗೊಂಡಿದೆ. ರಾಜ್ಯವನ್ನು ಪ್ರತಿನಿಧಿಸುವ ನಾಲ್ವರು ಹೊಸ ಕೇಂದ್ರ ಸಚಿವರು ಹಲವು ಉದ್ದೇಶಗಳೊಂದಿಗೆ ಜನರ ಬಳಿಗೆ ಆಗಮಿಸುತ್ತಿದ್ದು, ‘ಮೋದಿ ಸರ್ಕಾರ ಜನರ ಬಳಿ ಬರುತ್ತಿದೆ’ ಎಂಬ ಸಂದೇಶ ಹೊತ್ತ ಯಾತ್ರೆ ಇಂದಿನಿಂದ ಆರಂಭಗೊಂಡಿದೆ.

blank

ಇದನ್ನೂ ಓದಿ: ಕೇಂದ್ರದ ನಾಲ್ವರು ನೂತನ ಸಚಿವರಿಂದ ಇಂದಿನಿಂದ ಜನಾಶೀರ್ವಾದ ಯಾತ್ರೆ ಆರಂಭ -ಯಾತ್ರೆಯ ಅಸಲಿ ಉದ್ದೇಶವೇನು‌‌?

ಯಾತ್ರೆಯ ಅಂಗವಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಂಡ್ಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸೀದಾ ಭತ್ತದ ಗದ್ದೆಗೆ ಇಳಿದ ಅವರು ಭತ್ತದ ನಾಟಿಯಲ್ಲಿ ತೊಡಗಿದ್ದಾರೆ.

blank

ಜಿಲ್ಲೆಯ ಹೊನಗನಹಳ್ಳಿ ಗ್ರಾಮಕ್ಕೆ ಭೆಟಿ ನೀಡಿದ ಸಚಿವೆ ಶೋಭಾ ಕರಂದ್ಲಾಜೆ, ನಾಟಿ ಯಂತ್ರೋಪಕರಣಕೆ ಚಾಲನೆ ನೀಡಿದ ಅವರು ಭತ್ತದ ಗದ್ದೆಯಲ್ಲಿ ರೈತ ಮಹಿಳೆಯರ ಜೊತೆ ಸೇರಿ ನಾಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ  ಸಚಿವ ಎ.ನಾರಾಯಣಗೌಡ ಸಚಿವೆಗೆ ಸಾಥ್​ ನೀಡಿದ್ದಾರೆ..

blank

Source: newsfirstlive.com Source link