ಸಿಲಿಂಡರ್ ಸ್ಫೋಟಕ್ಕೆ ವ್ಯಕ್ತಿ ಬಲಿ – ಸಾವು ಬದುಕಿನ ಮಧ್ಯೆ ಮಗುವಿನ ಹೋರಾಟ

ಹುಬ್ಬಳ್ಳಿ: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೊರ್ವ ಸಾವನ್ನಪ್ಪಿದ ಘಟನೆ ಕಲಘಟಗಿಯಲ್ಲಿ ನಡೆದಿದೆ.

ಕಲಘಟಗಿ ತಾಲೂಕಿನ ತಬಕದ ಹೊನ್ನಳ್ಳಿ ಗ್ರಾಮದ ತಮ್ಮಣ್ಣವರ ಮನೆಯಲ್ಲಿ ಘಟನೆ ನಡೆದಿದ್ದು ಸ್ಫೋಟದ ತೀವ್ರತೆಯಿಂದ ವ್ಯಕ್ತಿ ಸಾವನ್ನಪ್ಪಿದ್ದು, ಒಂದು ವರ್ಷದ ಮಗು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವಂತಾಗಿದೆ.

ಭಾನುವಾರ ಸಂಜೆ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದ ತಮ್ಮಣ್ಣವರ ಮನೆಯಲ್ಲಿ ಸಿಲಿಂಡರ್ ಸೋರಿಕೆಯಾಗಿ ಸ್ಫೋಟವಾದ ಪರಿಣಾಮ ಯಲ್ಲಪ್ಪ(35) ಸ್ಫೋಟದ ತ್ರೀವತೆಗೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಂದು ವರ್ಷದ ಮಗುವಿಗೆ ಗಂಭೀರ ಗಾಯವಾಗಿದ್ದು, ಮಗು ಸಹ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ. ಇದೀಗ ಗಾಯಾಳು ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಸಿಲಿಂಡರ್ ಸ್ಫೋಟದ ತ್ರೀವತ್ರೆಗೆ ಮನೆಯ ಮೇಲ್ಛಾವಣಿ ಸಹ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಉಳಿದವರು ಬಚಾವ್ ಆಗಿದ್ದಾರೆ. ಘಟನೆಯ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಗದಗ್‍ನಲ್ಲಿ ಲೋಕ ಅದಾಲತ್ – ಮತ್ತೆ ಒಂದಾದ 5 ಜೋಡಿಗಳು

Source: publictv.in Source link