631 ದಿನ, 49 ಇನ್ನಿಂಗ್ಸ್, ಸಿಡಿಯಲಿಲ್ಲ ಶತಕ..! ಕೊಹ್ಲಿ ಕಾಲೆಳೆದ ಬಾರ್ಮಿ ಆರ್ಮಿ ಫ್ಯಾನ್ ಕ್ಲಬ್..!

631 ದಿನ, 49 ಇನ್ನಿಂಗ್ಸ್, ಸಿಡಿಯಲಿಲ್ಲ ಶತಕ..! ಕೊಹ್ಲಿ ಕಾಲೆಳೆದ ಬಾರ್ಮಿ ಆರ್ಮಿ ಫ್ಯಾನ್ ಕ್ಲಬ್..!

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ ಪಂದ್ಯ, ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಪಂದ್ಯದ ಫಲಿತಾಂಶ ಇಂದು ಹೊರಬರಲಿದೆ. ಆದ್ರೆ ಈಗಾಗಲೇ 2ನೇ ಇನ್ನಿಂಗ್ಸ್​ ಆರಂಭಿಸಿರುವ ಟೀಮ್ ಇಂಡಿಯಾ, 181 ರನ್​​ಗಳಿಗೆ 6 ಪ್ರಮುಖ ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ. ಇಂದಿನ ಪಂದ್ಯ ಕನಿಷ್ಠ ಡ್ರಾ ಮಾಡಿಕೊಳ್ಳಬೇಕಾದರೆ, ಕ್ರೀಸ್​ನಲ್ಲಿರುವ ರಿಷಭ್ ಪಂತ್ ಮ್ಯಾಜಿಕ್ ಮಾಡಬೇಕಿದೆ. ಆದ್ರೆ ಸತತ ವೈಫಲ್ಯ ಅನುಭವಿಸುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, 2ನೇ ಇನ್ನಿಂಗ್ಸ್​ನಲ್ಲಿ ಕೇವಲ 20 ರನ್​ಗೆ ವಿಕೆಟ್ ಒಪ್ಪಿಸಿ ಟೀಕಾಕಾರರಿಗೆ ಆಹಾರವಾಗಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಬಹುದೊಡ್ಡ ಫ್ಯಾನ್ಸ್​ ಕ್ಲಬ್ ಆಗಿರುವ ಬಾರ್ಮಿ ಆರ್ಮಿಯೂ, ಟೀಮ್ ಇಂಡಿಯಾ ನಾಯಕನ ಕಾಲೆಳೆಯುತ್ತಿದೆ.

2017, 2018ರ ಅವಧಿಯಲ್ಲಿ ಅಂತರಾಷ್ಟ್ರೀಯ ವರ್ಷದ ಕ್ರಿಕೆಟಿಗ ಪ್ರಶಸ್ತಿ ನೀಡಿ ಗೌರವಿಸಿದ್ದ ಇಂಗ್ಲೆಂಡ್​ನ ಬಾರ್ಮಿ ಆರ್ಮಿ, ಈಗ ವಿರಾಟ್​ ಕೊಹ್ಲಿ ವೈಫಲ್ಯ ಉಲ್ಲೇಖಿಸಿ ಟೀಕಿಸುತ್ತಿದೆ. ಬರೋಬ್ಬರಿ 631 ದಿನಗಳಿಂದ ವಿರಾಟ್​ ಶತಕ ಸಿಡಿಸಿಲ್ಲ ಎಂದು ಟ್ವೀಟ್​ ಮಾಡಿದೆ. ಅಂದ್ಹಾಗೆ ವಿರಾಟ್​, ಕಳೆದ 10 ಟೆಸ್ಟ್​ಗಳ 17 ಇನ್ನಿಂಗ್ಸ್​ಗಳಿಂದ 407 ರನ್ ಗಳಿಸಿದ್ದಾರೆ. ಈ ಪೈಕಿ ಮೂರು ಅರ್ಧಶತಕ ಒಳಗೊಂಡಿದೆ. 15 ಏಕದಿನ ಪಂದ್ಯದಲ್ಲಿ ಬ್ಯಾಟ್​ ಬೀಸಿರುವ ಕೊಹ್ಲಿ 649 ರನ್ ಕಲೆಹಾಕಿದ್ದು, 8 ಅರ್ಥಶತಕ ದಾಖಲಿಸಿದ್ದಾರೆ. ಇನ್ನು 18 ಟಿ20 ಪಂದ್ಯಗಳ ಪೈಕಿ 17 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ವಿರಾಟ್​, 709 ರನ್ ಗಳಿಸಿದ್ದಾರೆ. ಈ ಪೈಕಿ 6 ಅರ್ಧಶತಕ ದಾಖಲಿಸಿದ್ದಾರೆ. ಆ ಮೂಲಕ 49 ಇನ್ನಿಂಗ್ಸ್​ಗಳಿಂದ ವಿರಾಟ್​, ಶತಕದ ಸಿಡಿಸುವಲ್ಲಿ ವಿಫಲರಾಗಿದ್ದಾರೆ. ಇದು ಟೀಮ್ ಇಂಡಿಯಾ ನಾಯಕನಿಗೆ ಎಚ್ಚರಿಕೆ ಗಂಟೆ ಎಂದು ಕಾಲೆಳೆಯುತ್ತಿದ್ದಾರೆ.

 

Source: newsfirstlive.com Source link