‘ಬಿಜೆಪಿ ಸೇರುವಂತೆ ನನಗೂ ಕರೆ ಬಂದಿತ್ತು’: ಸ್ಫೋಟಕ ಹೇಳಿಕೆ ಕೊಟ್ಟ ಕೈ ಶಾಸಕ

‘ಬಿಜೆಪಿ ಸೇರುವಂತೆ ನನಗೂ ಕರೆ ಬಂದಿತ್ತು’: ಸ್ಫೋಟಕ ಹೇಳಿಕೆ ಕೊಟ್ಟ ಕೈ ಶಾಸಕ

ಬಳ್ಳಾರಿ: ನಾನೇನಾದ್ರೂ ಬಿಜೆಪಿಗೆ ಹೋಗಿದ್ರೇ ಈಗ ನಾನು ಮಂತ್ರಿಯಾಗ್ತಿದ್ದೇ, ಬಿಜೆಪಿ ಸರ್ಕಾರ ರಚನೆ ಸಂದ​ರ್ಭ​ದಲ್ಲಿ ನನಗೂ ಬಿಜೆಪಿ ಪಕ್ಷ​ದಿಂದ ಕರೆ ಬಂದಿತ್ತು. ಎಂದು ಹಗರಿಬೊಮ್ಮನಹಳ್ಳಿ ಕಾಂಗ್ರೆಸ್​ಶಾಸಕ ಎಸ್‌. ಭೀಮಾ​ನಾಯ್ಕ್ ಹೇಳಿ​ದ್ದಾ​ರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರ ನನಗೂ ಸಚಿವ ಸ್ಥಾನದ ಆಮಿಷ ಒಡ್ಡಿ ಪಕ್ಷ ಸೇರುವಂತೆ ಕರೆ ಬಂದಿತ್ತು, ಆದರೆ ನಾನು ಮಾಜಿ ಸಿಎಂ ಸಿದ್ದರಾಮಯ್ಯನವರ ಮುಖ ನೋಡ್ಕೊಂಡು  ಬಿಜೆಪಿಗೆ ಹೋಗಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನದಂದು ನನ್ನನ್ನು ಸ್ವತಂತ್ರವಾಗಿರಲು ಬಿಡಿ- ಸಚಿವ ಆನಂದ್ ಸಿಂಗ್​ ಹೀಗಂದಿದ್ದೇಕೆ..?

2013- 2018ರ ವರೆಗೆ ಜೆಡಿಎಸ್ ಶಾಸಕನಾಗಿದ್ರು ಸಿದ್ದರಾಮಯ್ಯ ಕೇಳಿದಷ್ಟು ಅನುದಾನ ಕೊಟ್ಟಿದ್ರು, ನಮ್ಮನ್ನ ಕಾಂಗ್ರೆಸ್ ಗೆ ಕರೆದುಕೊಂಡು ಬಂದಿದ್ದೇ ಸಿದ್ದರಾಮಯ್ಯ. ಹೀಗಾಗಿ ಬೇರೆಯವರು ಹೋದ್ರು ನನಗೆ ಹೋಗೋ ಮನಸ್ಸಾಗಲಿಲ್ಲ. ಈ ಬಗ್ಗೆ ಕುಟುಂಬದ ಸದಸ್ಯರ ಜೊತೆಗೆ ಸಾಕಷ್ಟು ಚರ್ಚೆ ಮಾಡಿ, ಅವರ ನಾಯಕತ್ವವನ್ನು ಬಿಟ್ಟು ಹೋಗಬಾರದೆಂಬ ತೀರ್ಮಾನಕ್ಕೆ ಬಂದಿದ್ದೆ ಎಂದಿದ್ದಾರೆ.

ಇದನ್ನೂ ಓದಿ: ನೂತನ ಜಿಲ್ಲೆ ವಿಜಯನಗರದಲ್ಲಿ 150 ಅಡಿ ಎತ್ತರಕೆ ಹಾರಿದ ತಿರಂಗಾ

Source: newsfirstlive.com Source link