ಖಾರವಾದ ಕಮೆಂಟ್ ನೋಡಿ ತಪ್ಪನ್ನು ಒಪ್ಪಿಕೊಂಡ ಕಿಚ್ಚನಿಗೆ ಮೆಚ್ಚುಗೆಯ ಚಪ್ಪಾಳೆ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಾಷ್ಟ್ರ ಗೀತೆಯನ್ನು ಹಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದಕ್ಕೆ ನೆಟ್ಟಿಗರೊಬ್ಬರು ರಾಷ್ಟ್ರಗೀತೆಯನ್ನು 48-52 ಸೆಕೆಂಡ್ ಒಳಗೆ ಹಾಡಬೇಕು ಎಂಬ ಕಾಮನ್ ಸೆನ್ಸ್ ಇಲ್ವಾ ಎಂದು ಖಾರವಾಗಿ ಕಾಮೆಂಟ್ ಮಾಡಿದ್ದು, ಕಿಚ್ಚ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಭಾನುವಾರ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದೆಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗಿತ್ತು. ಈ ಮಧ್ಯೆ ಸೆಲೆಬ್ರಿಟಿಗಳು ಕೂಡ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ನಡುವೆ ಕಿಚ್ಚ ಸುದೀಪ್‍ರವರು ಸ್ವಾತಂತ್ರ್ಯ ದಿನಾಚರಣೆಯ ದಿನದಂದು ರಾಷ್ಟ್ರಗೀತೆಯನ್ನು ಹಾಡಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ರಾಷ್ಟ್ರಗೀತೆಯನ್ನು 48 ರಿಂದ 52 ಸೆಕೆಂಡ್ ಒಳಗೆ ಹಾಡಬೇಕು ಆದರೆ ಸುದೀಪ್ 65 ಸೆಕೆಂಡ್‍ಗಳವರೆಗೆ ಹಾಡಿದ್ದಾರೆ.

ಇದನ್ನು ಗಮನಿಸಿದ ನೆಟ್ಟಿಗರೊಬ್ಬರು ಸರಿಯಾಗಿ ರಾಷ್ಟ್ರಗೀತೆ ಹಾಡಿ ಸರ್, ನಿಮ್ಮನ್ನು ತುಂಬಾ ಜನ ಫಾಲೋ ಮಾಡುತ್ತಾರೆ. ನೀವು ಟಾಪ್ ನಟ ಆಗಿರಬಹುದು ಆದರೆ 48-52 ಸೆಕೆಂಡ್‍ಗಳ ಒಳಗೆ ರಾಷ್ಟ್ರ ಗೀತೆಯನ್ನು ಹಾಡಬೇಕು ಎನ್ನುವ ಕಾಮನ್ ಸೆನ್ಸ್ ಇಲ್ವಾ ಎಂದು ಪ್ರಶ್ನಿಸಿ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ವೈಷ್ಣವಿಗೆ ದೆವ್ವದ ಕಥೆ ಹೇಳಿದ ಅಕುಲ್ ಬಾಲಾಜಿ

ಇದಕ್ಕೆ ಸುದೀಪ್ ಇದು ತುಂಬ ಒರಟಾಗಿದೆ ಆದರೂ ಒಪ್ಪಿಕೊಳ್ಳುತ್ತೇನೆ. ನನ್ನ ದೇಶದ ಮೇಲಿನ ಪ್ರೀತಿಯಿಂದ ಏನು ಅನಿಸಿತೋ ಅದನ್ನು ಮಾಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕಿಚ್ಚ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿಮ್ಮದು ದೊಡ್ಡ ಗುಣ, ನೀವು ನಿಜವಾದ ಜಂಟಲ್ ಮ್ಯಾನ್ ಎಂದು ಕಮೆಂಟ್ ಮಾಡುತ್ತಿದ್ದಾರೆ.

ನೆಟ್ಟಿಗರ ಕಮೆಂಟ್ ಸಂಬಂಧ ಸುದೀಪ್ ಮಾಡಿದ ಟ್ವೀಟ್‍ಗೆ 3 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ನಿಮ್ಮ ಪ್ರತಿ ಮಾತು ನನ್ನನ್ನು ಪ್ರತಿನಿಧಿಸುತ್ತದೆ – ಅಭಿಮಾನಿಗಳಲ್ಲಿ ಅರವಿಂದ್ ಮನವಿ

Source: publictv.in Source link