ಮದಲೂರು ಕೆರೆ ತುಂಬಿಸುವಂತೆ ರೈತರು, ಜೆಡಿಎಸ್ ಕಾರ್ಯಕರ್ತರಿಂದ ಪಾದಯಾತ್ರೆ

ಮದಲೂರು ಕೆರೆ ತುಂಬಿಸುವಂತೆ ರೈತರು, ಜೆಡಿಎಸ್ ಕಾರ್ಯಕರ್ತರಿಂದ ಪಾದಯಾತ್ರೆ

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಕೆರೆ ಮತ್ತೆ ಸುದ್ದಿಯಲ್ಲಿದೆ. ಪ್ರತಿ ಚುನಾವಣೆಲ್ಲೂ ಮದಲೂರು ಕೆರೆಗೆ ನೀರು ಹರಿಸುವ ವಿಚಾರವೇ ಪ್ರಮುಖ ರಾಜಕೀಯ ಅಸ್ತ್ರವಾಗಿ ಬಳಕೆಯಾಗ್ತಿತ್ತು.

blank

ಆದರೆ ರಾಜಕೀಯ ಗಣ್ಯರ ಭರವಸೆಗಳು, ಆಶ್ವಾಸನೆಗಳಿಂದ ಬೇಸತ್ತ ರೈತರು, ಮದಲೂರು ಕೆರೆಗೆ ನೀರು ಹರಿಸುವಂತೆ ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿದ್ದು, ಇವರಿಗೆ ಜೆಡಿಎಸ್ ಕಾರ್ಯಕರ್ತರೂ ಕೈ ಜೋಡಿಸಿದ್ದಾರೆ.

blank

ಸುಮಾರು 700 ಕ್ಕೂ ಹೆಚ್ಚು ರೈತರು ಹಾಗೂ ಜೆಡಿಎಸ್ ಕಾರ್ಯಕರ್ತರು ಪಾದಯಾತ್ರೆ ನಡೆಸಿದ್ದು, ನೀರು ಹರಿಸಿ, ಕೆರೆ ತುಂಬಿಸಿ ಎಂದು ಘೋಷಣೆ ಕೂಗುತ್ತಾ, ಶಿರಾ ತಾಲೂಕು ಕಚೇರಿವರೆಗೂ ಪಾದಯಾತ್ರೆ ನಡೆಸಿದ್ದಾರೆ. ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜೆಡಿಎಸ್ ಮುಖಂಡರಾದ ಉಗ್ರೇಶ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗ್ತಿದೆ.

ಇದನ್ನೂ ಓದಿ:  ‘ಯೋಗ್ಯತೆಗಷ್ಟು ಬೆಂಕಿ ಹಾಕ.. ಸುಳ್ಳು ಯಾಕೆ ಬೊಗಳುತ್ತಿಯಾ’ -ಗುಬ್ಬಿ ಶಾಸಕ, ಬಿಜೆಪಿ ಸಂಸದರ ಮಧ್ಯೆ ವಾಕ್​ ಸಮರ

ಇದನ್ನೂ ಓದಿ: ಮದಲೂರು ಕೆರೆಗೆ ನೀರು: ಹೋರಾಟದ ಹಾದಿ ಹಿಡಿದ ಹಾಲಿ, ಮಾಜಿ ಶಾಸಕರು..

Source: newsfirstlive.com Source link