ಅಫ್ಘಾನಿಸ್ತಾನ ಅಯೋಮಯ; ವಿಮಾನದ ಚಕ್ರ ಹಿಡಿದು ಕೂತಿದ್ದ ಇಬ್ಬರು ಕೆಳಗೆ ಬಿದ್ದು ದಾರುಣ ಸಾವು

ಅಫ್ಘಾನಿಸ್ತಾನ ಅಯೋಮಯ; ವಿಮಾನದ ಚಕ್ರ ಹಿಡಿದು ಕೂತಿದ್ದ ಇಬ್ಬರು ಕೆಳಗೆ ಬಿದ್ದು ದಾರುಣ ಸಾವು

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನ್ನು ವಶಪಡಿಸಿಕೊಳ್ಳುತ್ತಿದ್ದಂತೆ ಅಫ್ಘಾನಿಸ್ತಾನ ಜನರು ಪ್ರಾಣಭಯಕ್ಕೆ ಸಿಲುಕಿದ್ದಾರೆ. ಹೀಗಾಗಿ ಕಾಬೂಲ್​ನಿಂದ ಬೇರೆ ದೇಶಗಳಿಗೆ ತೆರಳುತ್ತಿರುವ ವಿಮಾನಗಳಲ್ಲಿ ಕಿಕ್ಕಿರಿದು ತುಂಬುತ್ತಿರುವ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿದ್ದಾರೆ.

ವಿಮಾನ ತುಂಬಿದ್ದರಿಂದ ಬೇರೆ ದಾರಿ ಕಾಣದೇ ಇಬ್ಬರು ಆಫ್ಘನ್ ಪ್ರಜೆಗಳು ವಿಮಾನದ ಚಕ್ರವನ್ನೇ ಹಿಡಿದ ಕೂರುವ ಮೂಲಕ ಬೇರೊಂದು ದೇಶಕ್ಕೆ ತೆರಳುವ ಪ್ರಯತ್ನ ಮಾಡಿದ್ದಾರೆ. ವಿಮಾನ ಮೇಲೆ ಹಾರುತ್ತಿದ್ದಂತೆಯೇ ವಿಮಾನದ ವೇಗ ತಡೆಯಲಾಗದೇ ಚಕ್ರ ಹಿಡಿದು ಕೂತಿದ್ದ ಇಬ್ಬರೂ ಹಾರುವ ವಿಮಾನದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಇತಿಹಾಸ ಕಂಡರಿಯದಂತ ಕೆಲವು ದುರಂತ ಕ್ಷಣಗಳಿಗೆ ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ಕಾರಣವಾಗುತ್ತಿದೆ.

Source: newsfirstlive.com Source link