ಪಂತ್, ಇಶಾಂತ್ ಮೇಲೆ ಕೋಪಗೊಂಡ ಕೊಹ್ಲಿ: ವೀಡಿಯೋ ವೈರಲ್

ಲಂಡನ್: ಟೀಂ ಇಂಡಿಯಾದ ಆಟಗಾರರಾದ ರಿಷಬ್ ಪಂತ್ ಮತ್ತು ಇಶಾಂತ್ ಶರ್ಮಾ ಮೇಲೆ ನಾಯಕ ವಿರಾಟ್ ಕೊಹ್ಲಿ ಕೋಪಗೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸಿರೀಸ್ ಪಂದ್ಯಗಳು ನಡೆದಿದ್ದು, ಲಾರ್ಡ್ಸ್ ಅಂಗಳದಲ್ಲಿ ಪಂದ್ಯ ನಡೆದಿತ್ತು. ನಾಲ್ಕನೇ ದಿನದ ಅಂತ್ಯದಲ್ಲಿ ಲಾರ್ಡ್ಸ್ ಅಂಗಳ ವಿಚಿತ್ರ ಘಟನೆಗೆ ಸಾಕ್ಷಿಯಾಯ್ತು. ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬಾಲ್ಕನಿಯಲ್ಲಿ ನಿಂತು ಮೈದಾನದಲ್ಲಿದ್ದ ರಿಷಬ್ ಪಂತ್ ಮತ್ತು ಇಶಾಂತ್ ಶರ್ಮಾಗೆ ಕೋಪದಿಂದ ಸಂದೇಶ ನೀಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.

ಇಬ್ಬರ ಮೇಲೆ ಕೋಪಗೊಂಡಿದ್ಯಾಕೆ?:
ಪಂದ್ಯದ ಅಂತಿಮದಲ್ಲಿ ಬೆಳಕಿನ ಪ್ರಖರತೆ ಕಡಿಮೆಯಾದ ಪರಿಣಾಮ ಚೆಂಡು ಕಾಣಿಸುತ್ತಿರಲಿಲ್ಲ. ಆದ್ರೂ ರಿಷಬ್ ಪಂತ್ ಮತ್ತು ಇಶಾಂತ್ ಶರ್ಮಾ ಅಂಪೈರ್ ಗೆ ದೂರು ನೀಡದೇ ಆಟ ಮುಂದುವರಿಸಿದ್ದರು. ಇತ್ತ ಇದೇ ವೇಳೆ ಬೌಲರ್ ಹೊಸ ಬಾಲ್ ಕೇಳಿ ಪಡೆದುಕೊಳ್ಳುತ್ತಿದ್ದರು. ಹಾಗಾಗಿ ಲಾಡ್ರ್ಸ್ ಮೈದಾನದ ಬಾಲ್ಕನಿಯಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೋಪಗೊಂಡು ಇಬ್ಬರು ಆಟಗಾರರಿಗೆ ಇಷ್ಟು ಮಂದ ಬೆಳಕಿನಲ್ಲಿಯೇ ಹೇಗೆ ಅಡುತ್ತೀದೀರಾ? ಎಂದು ಸನ್ನೆ ಮೂಲಕ ಸಂದೇಶ ರವಾನಿಸಿದರು. ಇದಾದ ಬಳಿಕ ನಾಲ್ಕನೇ ದಿನದ ಆಟ ಅಂತ್ಯವಾಯ್ತು. ಇದನ್ನೂ ಓದಿ: ಸಿರಾಜ್ ವಿಕೆಟ್ ಪಡೆದ ಬಳಿಕ ವಿಶೇಷ ಸಂಭ್ರಮಾಚರಣೆಯ ಕಹಾನಿ ರಿವೀಲ್

ಬಾಲ್ ಟ್ಯಾಂಪರಿಂಗ್ ಆರೋಪ:
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು ಶೂನಿಂದ ಚೆಂಡನ್ನು ತುಳಿದು ವಿರೂಪಗೊಳಿದ್ದಾರೆ ಎಂಬ ಕುರಿತು ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ. ಇಂಗ್ಲೆಂಡ್‍ನ ಇಬ್ಬರು ಆಟಗಾರರು ಶೂನಲ್ಲಿ ಚೆಂಡನ್ನು ತುಳಿದಿರುವ ಫೋಟೋಗಳನ್ನು ಹಾಕಿ ಆಂಗ್ಲ ಆಟಗಾರರು ಕಳ್ಳಾಟದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಜಿ ಆಟಗಾರರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಆಸೀಸ್ ಆಟಗಾರ – ಸ್ಮಿತ್ ನಾಯಕತ್ವ ತಲೆದಂಡ? 

Source: publictv.in Source link